`ಅನಂತ’ ದೂರದಿಂದ ತೀವ್ರ ನೋವಾಗಿದೆ: ಶಾಸಕ ಸವದಿ

0
11

ರಬಕವಿ-ಬನಹಟ್ಟಿ: ಬಹು ಅಂಗಾಂಗದ ವೈಫಲ್ಯದಿಂದ ಬಳಲುತ್ತಿದ್ದ ಬಿಜೆಪಿ ಪಕ್ಷದ ಹಿರಿಯ ನಾಯಕ, ಕೇಂದ್ರ ಸಚಿವ ಅನಂತಕುಮಾರರ ಅಗಲಿಕೆಗೆ ತೇರದಾಳ ಕ್ಷೇತ್ರದ ಬಿಜೆಪಿ ಕಾರ್ಯಾಲಯದಲ್ಲಿ ಸಂತಾಪ ಸಭೆ ಜರುಗಿತು. ಇದೇ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷ, ಶಾಸಕ ಸಿದ್ದು ಸವದಿ ಮಾತನಾಡಿ, ತಮ್ಮ ವಾಕ್ ಚಾತುರ್ಯದಿಂದಲೇ ದೇಶದ ಗಮನ ಸೆಳೆದು ಬಿಜೆಪಿ ಪಕ್ಷವನ್ನು ಬೇರು ಮಟ್ಟದಲ್ಲಿ ಬೆಳೆಸುವಲ್ಲಿ ಕಾರಣರಾಗಿ, ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಆಡಳಿತ ನಡೆಸುವಲ್ಲಿ ಮುಂಚೂಣಿ ಪಾತ್ರ ವಹಿಸಿದವರಲ್ಲೊಬ್ಬರು. ಇಂಥವರ ಅಗಲಕೆಯಿಂದ ಪಕ್ಷಕ್ಕೆ ತೀವ್ರ ನೋವುಂಟು ಮಾಡುವಲ್ಲಿ ಕಾರಣವಾಗಿದೆ ಎಂದರು. ಇದೇ ಸಂದರ್ಭ ಅವರೊಂದಿಗಿನ ಒಡನಾಟದ ಬಗ್ಗೆ ಸವದಿ ನೆನೆದು ಸ್ಮರಿಸುವಲ್ಲಿ ಕಾರಣರಾದರು. ಇಂಥವರ ಸೇವೆ ಪಕ್ಷಕ್ಕೆ ಹಾಗು ದೇಶಕ್ಕೆ ಅನಿವಾರ್ಯವಾಗಿದ್ದು, ಇವರ ಮಾರ್ಗದರ್ಶನದಲ್ಲಿಯೇ ನಾವೆಲ್ಲ ಮುನ್ನಡೆಯಬೇಕೆಂದರು. ಇದೇ ಸಂದರ್ಭ ಪಕ್ಷದ ನಗರ ಘಟಕದ ಅಧ್ಯಕ್ಷ ರಾಜು ಅಂಬಲಿ, ಬಸಯ್ಯ ಹಿರೇಮಠ, ಹೀರಾಚಂದ ಕಾಸಾರ, ರಾಜು ಬಾಣಕಾರ, ಕುಮಾರ ಕದಮ, ಗೋವಿಂದ ಡಾಗಾ, ಶ್ರೀಶೈಲ ಬೀಳಗಿ, ವಿಜಯ ಕಲಾಲ, ಶ್ರೀಶೈಲ ಆಲಗೂರ, ಶೇಖರ ಹಕ್ಕಲದಡ್ಡಿ, ಪ್ರಕಾಶ ಸಿಂಗನ್, ಪ್ರವೀಣ ದಭಾಡಿ, ಈಶ್ವರ ಪಾಟೀಲ, ಭೀಮಶಿ ಪಾಟೀಲ, ರಾವಳ ಸೇರಿದಂತೆ ಅನೇಕರಿದ್ದರು.

loading...