ಮೌಢ್ಯತೆ ದೂರ ಮಾಡಲು ಶ್ರಮಿಸಿದವರು ಸಿದ್ದಲಿಂಗ ಶ್ರೀಗಳು: ಸಚಿವ ಎಂ.ಸಿ.ಮನಗೂಳಿ

0
11

ಮೌಢ್ಯತೆ ದೂರ ಮಾಡಲು ಶ್ರಮಿಸಿದವರು ಸಿದ್ದಲಿಂಗ ಶ್ರೀಗಳು: ಸಚಿವ ಎಂ.ಸಿ.ಮನಗೂಳಿ
ಕನ್ನಡಮ್ಮ ಸುದ್ದಿ-ಸಿಂದಗಿ: ಗದಗಿನ ತೋಂಟದಾರ್ಯ ಮಠದ ಲಿಂ ಸಿದ್ದಲಿಂಗ ಮಹಾಸ್ವಾಮಿಗಳು ಸಮಾಜದಲ್ಲಿನ ಮೌಢ್ಯತೆದೂರೆಗಳನ್ನು ಮಾಡುವಲ್ಲಿ ಹಗಲಿರಳು ಶ್ರಮಿಸಿದವರು. ಅವರನ್ನು ಈ ಶತಮಾನದ ಸಾಮಾಜಿಕ ಸಂತ ಎಂದರೂ ತಪ್ಪಾಗಲ್ಲ. ಸ್ವಾಮಿತ್ವಕ್ಕೆ ಅಕ್ಷರಸಹ ಹೆಸರನ್ನು ನೀಡಿದವರು ಲಿಂ ಶ್ರೀ ಸಿದ್ದಲಿಂಗ ಸ್ವಾಮಿಗಳು. ಬಸವಣ್ಣನವರ ವಚನಗಳನ್ನು ತಮ್ಮ ಮುದ್ರಣಾಲಯದಲ್ಲಿ ಮುದ್ರಿಸಿ ಬಸವ ಬೆಳಕನ್ನು ನಾಡಿಗೆ ನೀಡಿದ ಔದಾರ್ಯದ ಯೋಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಹೇಳಿದರು.
ಅವರು ಪಟ್ಟಣದ ಅಂಜುಮನ್‌ ಶಿಕ್ಷಣ ಸಂಸ್ಥೆ ಬುಧವಾರ ಹಮ್ಮಿಕೊಂಡಿದ್ದ ಗುರು ಸ್ಮರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಿಂದಗಿಯ ನೆಲದಲ್ಲಿ ಹುಟ್ಟಿ ಬಸವಾದಿ ಶರಣರ ಸಂದೇಶಗಳನ್ನು ಈ ನಾಡಿಗೆ ಪಸರಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದು ಹೇಳಿದ ಅವರು ಸಿಂದಗಿ ಕೆರೆಯ ಪಕ್ಕದಲ್ಲಿನ ಗಾರ್ಡನ ಜಾಗೆಯಲ್ಲಿ ಶ್ರೀಗಳ ಮೂರ್ತಿ ಪ್ರತಿಷ್ಠಾಪಿಸಲು ನಾನು ಬದ್ಧನಾಗಿದ್ದೇನೆ ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಸಮಾರಂಭದಲ್ಲಿ ವಿಧಾನ ಪರಿಷತ್ತ ಸದಸ್ಯ ಸಿ.ಎಂ.ಇಬ್ರಾಹಿಂ ಮಾತನಾಡಿ, 1996 ಜ.26 ರ ಸಮಯದಲ್ಲಿ ಹುಬ್ಬಳ್ಳಿಯ ಇದ್ಗಾ ಮೈದಾನದಲ್ಲಿ ಶ್ರೀಗಳು ತಾವೇ ಮುಂದೆ ನಿಂತು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ದು ಇಂದು ಐತಿಹಾಸಿಕ ಸಾಧನೆ. ಪ್ರತಿಯೊಬ್ಬರೂ ಲಿಂಗಧಾರಣೆಯನ್ನು ಮಾಡಿಕೊಳ್ಳಬೇಕು. ಲಿಂಗಧಾರಣೆಯಾದರೆ ದಲಿತನು ಮಠಾಧೀಶನಾಗಬಹುದು ಎಂದು ತಿಳಿ ಹೇಳಿದಂತವರು. ಮುಸ್ಲಿಂ ಶಿಕ್ಷಣ ಸಂಸ್ಥೆಯೊಂದರಲ್ಲಿ ಹಿಂದೂ ಸ್ವಾಮಿಯೊಬ್ಬರ ಸ್ಮರಣೆ ಮಾಡುತ್ತಿರುವುದು ಈ ಭಾರತ ಕಲಿಸಿದ ಒಂದು ದೊಡ್ಡ ಸಂಸ್ಕೃತಿ ಅದಕ್ಕೆ ನಾವೇಲ್ಲ ತೆಲೆಬಾಗಬೇಕು. ಲಿಂ ಶ್ರೀ ತೋಂಟದ ಶ್ರೀಗಳು ತತ್ವ ಆದರ್ಶ, ಮಾನವೀಯತೆಯ ದೊಡ್ಡ ಖಜಾನೆಯಾಗಿದ್ದರು.
ಸಮಾಜ ಪರಿವರ್ತನಕಾರರ ನೆತ್ತಿಯ ಮೇಲೆ ಸದಾ ಕತ್ತಿ ಇರುತ್ತದೆ ಇದು ಶ್ರೀಗಳು ಸಾಕಷ್ಟು ಅನುಭವಿಸಿದ್ದಾರೆ. ಸಿಂದಗಿಯಲ್ಲಿ ಅವರ ಮೂರ್ತಿ ಪ್ರತಿಷ್ಠಾಪನೆಗೆ ಮುಸ್ಲಿಂ ಸಮಾಜದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಪುರಸಭೆಯ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ಶ್ರೀಗಳು ಮಾಡಿದ ಕಾರ್ಯವನ್ನು ನಾವು ಸದಾ ಸ್ಮರಿಸುವುದರ ಜೋತೆಗೆ ಸಿಂದಗಿಯಲ್ಲಿ ಅವರ ಹೆಸರಿನಲ್ಲಿ ಭವ್ಯವಾದ ಸ್ಮಾರಕ ಭವನ ನಿರ್ಮಾಣವಾಗಬೇಕು ಎಂದು ಸಚಿವರಲ್ಲಿ ಮನವಿ ಮಾಡಿಕೊಂಡರು.
ಸಾನಿಧ್ಯವಹಿಸಿದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯಂಜಯ ಸ್ವಾಮಿಗಳು ಹಾಗೂ ಆಲಮೇಲದ ವಿರಕ್ತಮಠದ ಮಲ್ಲಿಬೊಮ್ಮಯ್ಯ ಶ್ರೀಗಳು ಆಶೀರ್ವಚನ ನೀಡಿ, ಸಿದ್ದಲಿಂಗ ಸ್ವಾಮಿಗಳು ಮಠಾಧೀಶರಿಗೆ ಹೊಸ ಮಾರ್ಗದರ್ಶಕರು, ಕನ್ನಡದ ಕುಲಗುವಾಗಿ ಕನ್ನಡದ ಅನೇಕ ಹೋರಾಟಗಳನ್ನು ಮಾಡಿದಂತ ಶ್ರೀಗಳು ಒಬ್ಬ ವೈಚಾರಿಕ ನಕ್ಷತ್ರದ ಹಾಗೆ ಕಾರ್ಯ ಮಾಡಿದಂತವರು ಎಂದರು.
ಸಂಸ್ಥೆಯ ಕಾರ್ಯದರ್ಶಿ ಎಸ್‌.ಎಮ್‌.ಪಾಟೀಲ ಗಣಿಹಾರ, ಸಾಧೀಕ ಸುಂಭಡ ಮಾತನಾಡಿದರು. ವೇದಿಕೆಮೇಲೆ ಶಿವಪ್ಪಗೌಡ ಬಿರಾದಾರ, ನಾಗರಾಜ ಲಂಭು, ವಾಬ ಸುಂಭಡ, ಅಕ್ಬರ ಮುಲ್ಲಾ, ಸಂಸ್ಥೆಯ ಅಧ್ಯಕ್ಷ ಎ.ಎ.ದುದನಿ, ನಿರ್ದೇಶಕರಾದ ಮೈಬೂಬ ಹಸರಗುಂಡಗಿ, ಝಡ್‌.ಆಯ್‌.ಅಂಗಡಿ ಹಾಗೂ ಇತರರು ಇದ್ದರು.
ಆಲಮೇಲದ ಐಶ್ವರ್ಯ ಕೊಳಾರಿ ಪ್ರಾರ್ಥಸಿದರು, ಮಹ್ಮದ ಮೌಲಾನಾ ಇಟಗಿ ಖುರಾನ ಪಠಾಣ ನೆರವೇರಿಸಿದರು, ಪ್ರಾಚಾರ್ಯಎಂ.ಡಿ.ಬಳಗಾನೂರ ಸ್ವಾಗತಿಸಿದರು, ಶಿಕ್ಷಕ ಪ್ರಭುಲಿಂಗ ಲೋಣಿ ನಿರೂಪಿಸಿದರು, ಎಸ್‌.ಎ.ದೊಡಮನಿ ವಂದಿಸಿದರು.

loading...