ಕನಕದಾಸರ ಕೃತಿಗಳು ಸಮಾಜ ನಿರ್ಮಾಣದ ಶ್ರೇಷ್ಠ ರಚನೆಗಳು: ನಾಯ್ಕ

0
24

 

ಕನ್ನಡಮ್ಮ ಸುದ್ದಿ-ಹೊನ್ನಾವರ: ಕೀರ್ತನೆಗಳನ್ನು ಒಳಗೊಂಡಂತೆ ಕನಕದಾಸರ ಎಲ್ಲ ಕೃತಿಗಳೂ ಭೇದವನ್ನು ಎಣಿಸದೆ ಭಕ್ತಿಯ ಮಾರ್ಗದಲ್ಲಿ, ಸಮಸಮಾಜವನ್ನು ನಿರ್ಮಿಸುವ ಆಶಯದ ಶ್ರೇಷ್ಠ ಕೃತಿಗಳಾಗಿವೆ ಎಂದು ಡಾ.ಸುರೇಶ ನಾಯ್ಕ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಪ್ರಭಾತನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಕ್ಷಿ ಶಿಕ್ಷಕರ ಬಳಗದಿಂದ ನಡೆದ ‘ನನ್ನ ನೆಚ್ಚಿನ ಕನ್ನಡ ಕವನದ ಓದು, ಹಾಡು ಮತ್ತು ಕನಕಸ್ಮರಣೆ’ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಇಂದಿನ ಪರಿಸ್ಥಿತಿಯಲ್ಲಿ ಅವರ ಕೀರ್ತನೆಗಳು, ಮುಂಡಿಗೆಗಳು, ರಾಮಧಾನ್ಯ ಚರಿತದಂತಹ ಕೃತಿಗಳ ಓದಿನ ಮಹತ್ವವನ್ನು ವಿವರಿಸಿದರು.

ಹಿರಿಯ ಶಿಕ್ಷಕರಾದ ಆರ್.ಎಸ್.ಭಟ್, ಶಾರದಾ ಶರ್ಮಾ ವೇದಿಕೆಯಲ್ಲಿದ್ದು ಕವನ ವಾಚಿಸಿ ಮಾತನಾಡಿದರು. ಶಿಕ್ಷಕರುಗಳಾದ ಕೃಷ್ಣ ಅಂಬಿಗ, ಸಿದ್ದಲಿಂಗ ಸ್ವಾಮಿ, ಎಸ್.ಎಚ್ ಗೌಡ, ಎಮ್.ಎಸ್.ಹೆಗಡೆ, ಕಮಲಾ ಭಾಗ್ವತ್, ಸುಚೇತಾ ಸಿಂಗನಕುಳಿ, ಯೋಗೀಶ ನಾಯ್ಕ ಮೊದಲಾದವರು ತಮ್ಮ ಕವನ ಪ್ರಸ್ತುತಪಡಿಸಿದರು. ಸುನಂದಾ ಭಟ್, ಹರಿಶ್ಚಂದ್ರ ನಾಯ್ಕ ಮತ್ತು ಮಮತಾ ಭಾಗ್ವತ್ ಹಾಡುಗಳಿಗೆ ಧ್ವನಿ ನೀಡಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಿಕ್ಷಕ ಜಿ.ಎಸ್.ಹೆಗಡೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ರಮೇಶ ಮಲ್ಲಪ್ಪ ಕೊನೆಯಲ್ಲಿ ಎಲ್ಲರನ್ನೂ ವಂದಿಸಿದರು. ಸಂಘಟನೆಯ ಜನಾರ್ದನ ನಾಯ್ಕ, ನೇತ್ರಾವತಿ ಹೆಗಡೆ, ಕೃಷ್ಣ ಹರಿಕಾಂತ, ಆರ್ ಎಸ್.ಹೆಗಡೆ, ಪದ್ಮಾವತಿ ನಾಯ್ಕ, ತ್ರಿವೇಣಿ ಹೆಗಡೆ, ರೋಹಿದಾಸ ನಾಯ್ಕ ಮೊದಲಾದವರು ಭಾಗವಹಿಸಿದ್ದರು.

loading...