ಕನಕದಾಸರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ: ಶಾಸಕ ಬಂಡಿ

0
59

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ದಾಸರಲ್ಲಿ ಶ್ರೇಷ್ಠ ದಾಸರೆಂದು ಕೀರ್ತಿ ಪಡೆದ ಕನಕದಾಸರು ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ಬೋಧಿಸಿದ ಶ್ರೇಷ್ಠ ದಾಸರು. ಈ ನಿಟ್ಟಿನಲ್ಲಿ ಕನಕದಾಸರ ಆದರ್ಶ ಹಾಗೂ ಮೌಲ್ಯಗಳನ್ನು ಇಂದಿನ ಯುವ ಸಮೂಹವು ಮೈಗೂಡಿಸಿ ಕೊಳ್ಳುವುದರ ಮೂಲಕ ಸಮಾಜದಲ್ಲಿ ಏಕತೆ ತರಲು ಪ್ರಯತ್ನಿಸಬೇಕು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
ಪಟ್ಟಣದ ಬಂಡಿ ಗಾರ್ಡನ್‍ನಲ್ಲಿ ಸೋಮವಾರ ಗಜೇಂದ್ರಗಡ ತಾಲೂಕಾ ಹಾಲುಮತ ಸಮಾಜದ ವತಿಯಿಂದ ನಡೆದ ದಾಸ ಶ್ರೇಷ್ಠ,ಸಂತಕವಿ ಭಕ್ತ ಕನಕದಾಸರ 351ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ. ಸಮಾಜದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆ ಕಂದಾಚಾರಗಳಿಗೆ ಇತಿಶ್ರೀ ಹಾಡಲು ತಮ್ಮ ಅಮೂಲ್ಯ ಕೀರ್ತನೆಗಳ ಮೂಲಕ ಮಾನವರೆಲ್ಲರೂ ಒಂದೇ ಎಂದು ಸಾರಿ ಹೇಳಿದ ಕನಕದಾಸರ ಸಂದೇಶಗಳು ಇಂದಿಗೂ ಪ್ರಸುತ್ತವಾಗಿವೆ ಎಂದರು.
ಮುಖಂಡ ಶರಣಪ್ಪ ಡೊಣ್ಣೆಗುಡ್ಡ ಮಾತನಾಡಿ, ಪ್ರತಿಯೊಬ್ಬರಲ್ಲಿ ಮಾನವೀಯ ಮೌಲ್ಯಗಳ ಮಹತ್ವ ಸಾರುವುದರ ಜೊತೆಗೆ ಮಾನವ ಜನಾಂಗದ ಅಭಿವೃದ್ದಿಗೆ ಶ್ರಮಿಸಿದ ಮಹಾನ್ ಚೇತನ ಕನಕದಾಸರು. ಹೀಗಾಗಿ ನಾವೆಲ್ಲರೂ ಪ್ರೀತಿ, ವಿಶ್ವಾಸ ಹಾಗೂ ಸಹಬಾಳ್ವೆಯಿಂದ ಜೀವನ ನಡೆಸಬೇಕು ಎಂದರು. ಮುಖಂಡ ರವಿ ದಂಡಿನ ಮಾತನಾಡಿ, ಗಜೇಂದ್ರಗಡ ತಾಲೂಕಿನಲ್ಲಿ ನೂತನ ಕನಕ ಭವನ ನಿರ್ಮಿಸಲು ಶಾಸಕರು ಸರ್ಕಾರಿ ಜಾಗೆ ಜೊತೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಸಮಾಜದ ವತಿಯಿಂದ ಮಾಡಿದ ಮನವಿಗೆ ಶಾಸಕ ಬಂಡಿ ಶೀಘ್ರದಲ್ಲಿಯೇ ಸಂಸದ ಶಿವಕುಮಾರ ಉದಾಸಿ ಅವರೊಂದಿಗೆ ಮಾತನಾಡಿ ಪಟ್ಟಣದಲ್ಲಿ ಕನಕ ಭವನ ನಿರ್ಮಿಸುವ ಭರವಸೆ ನೀಡಿದರು.
ಇದಕ್ಕೂ ಮುನ್ನ ಪಟ್ಟಣದ ಕೆ.ಎಸ್.ಎಸ್ ಕಾಲೇಜು ಮುಂಭಾಗದಿಂದ ಆರಂಭವಾದ ಕನಕದಾಸರು ಭಾವಚಿತ್ರದ ಮೆರವಣಿಗೆಯು ಇಲ್ಲಿನ ದುರ್ಗಾವೃತ್ತ, ಕೆ.ಕೆ.ವೃತ್ತ ಮಾರ್ಗವಾಗಿ ಬಂಡಿ ಗಾರ್ಡನ್ ತಲುಪಿದ ಮೆರವಣಿಗೆಯಲ್ಲಿ ಮಹಿಳೆಯರು ಕುಂಭಹೊತ್ತು, ಆರತಿಯೊಂದಿಗೆ ಸಾಗಿದರು. ಸಮಾಜದ ಅಧ್ಯಕ್ಷ ಸಂಗಪ್ಪ ಯಲಿಗಾರ, ಮಲ್ಲಪ್ಪ ಆವಾರಿ, ಉಮೇಶ ಹೊಸಳ್ಳಿ, ಕಳಕಪ್ಪ ಡೊಳ್ಳಿನ, ಪರಶುರಾಮ ಚಿಲ್‍ಝರಿ,
ಬಸಪ್ಪ ವದೆಗೋಳ, ಮುದಿಯಪ್ಪ ಕರಡಿ, ಹನಮಂತ ವದೆಗೋಳ, ಮುತ್ತಯ್ಯ ಕಾರಡಗಿಮಠ, ನಿಂಗಪ್ಪ ಮಾಸ್ತಿ, ಸಂಗಪ್ಪ ವದೆಗೋಳ, ಅಶೋಕ ವನ್ನಾಲ, ಭಾಸ್ಕರ ರಾಯಬಾಗಿ, ವೀರಣ್ಣ ಅಂಗಡಿ, ಸಂಜೀವ ಜೋಶಿ, ಅಶೋಕ ವದೆಗೋಳ, ಸುರೇಶ ವದೆಗೋಳ ಇದ್ದರು.

loading...