ಅಪಘಾತ: ಹಲವರಿಗೆ ಗಾಯ

0
32

ಯಲಬುರ್ಗಾ: ಅಂತ್ಯಕ್ರೀಯೆಗಾಗಿ ಜನರನ್ನು ಕರೆದೊಯ್ಯುತ್ತಿದ್ದ ಗೂಡ್ಸ್ ಗಾಡಿಯೊಂದು ರಸ್ತೆ ಪಕ್ಷ ಉರುಳಿ ಬಿದ್ದು 10ಕ್ಕೂ ಹೆಚ್ಚು ಜನರಿಗೆ ಸಣ್ಣ ಪುಟ್ಟ ಗಾಯವಾಗಿರುವ ಘಟನೆ ತಾಲೂಕಿನ ಗುತ್ತೂರು ಕ್ರಾಸ್ ಬಳಿ ಶುಕ್ರವಾರ ನಡೆದಿದೆ. ತಾಲೂಕಿನ ಕರಮುಡಿ ಗ್ರಾಮದ ಜನರು ತಮ್ಮ ಸಂಬಂಧಿಕರ ಅಂತ್ಯಕ್ರಿಯೆಗಾಗಿ ತಾಲೂಕಿನ ಮ್ಯಾದನೇರಿ ಗ್ರಾಮಕ್ಕೆ ಜನರನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವಣಗೇರಿ, ಗುತ್ತೂರು ಕ್ರಾಸ ಹತ್ತಿರ ರಸ್ತೆ ಬದಿಗೆ ಉರುಳಿ ಬಿದ್ದು ಅದರಲ್ಲಿದ್ದ ಸುಮಾರು 10ಕ್ಕೂ ಹೆಚ್ಚು ಪುರುಷ ಮತ್ತು ಮಹಿಳೆಯರಿಗೆ ಸಣ್ಣ ಪುಟ್ಟ ಗಾಯವಾಗಿದೆ.

loading...