ಬಸವಣ್ಣ ವೃತ್ತದಲ್ಲಿ ಧ್ವಜಸ್ತಂಭ ಸ್ಥಾಪನೆಗೆ ಮನವಿ

0
15

ಕನ್ನಡಮ್ಮ ಸುದ್ದಿ-ಗಂಗಾವತಿ: ಬಸವಣ್ಣ ವೃತ್ತದಲ್ಲಿ ಕನ್ನಡ ಧ್ವಜಸ್ತಂಭ ಸ್ಥಾಪಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಜೀರಾಳ ಅಕ್ಬರ್ ಮತ್ತು ಕಾರ್ಯದರ್ಶಿ ಎಸ್.ಎಸ್.ಪಾಷಾ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ತಮ್ಮ ಸಂಘಟನೆ ಕನ್ನಡ ನಾಡು, ನುಡಿ, ಸಂಸ್ಕøತಿ ಉಳಿವಿಗಾಗಿ ಸ್ಪಂದಿಸುವ ಉದ್ಧೇಶ ಹೊಂದಿದೆ. ಸಮಸ್ತ ಜನರಿಗೆ ಶಿಕ್ಷಣ, ಕಾನೂನು, ಕುರಿತು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಡಿಸೆಂಬರ್ ತಿಂಗಳಿನಲ್ಲಿ ತಮ್ಮ ಸಂಘಟನೆ ಉದ್ಘಾಟನೆಗೊಳ್ಳಲಿದೆ. ಇದರ ಅಂಗವಾಗಿ ಬಸವಣ್ಣ ವೃತ್ತದಲ್ಲಿ ಕನ್ನಡ ಧ್ವಜ ಸ್ತಂಭ ಸ್ಥಾಪನೆ ಮಾಡುವ ಉದ್ದೇಶವನ್ನು ನಮ್ಮ ಸಂಘಟನೆ ಹೊಂದಿದೆ. ಪ್ರತಿವರ್ಷ ನವೆಂಬರ್-1 ರಂದು ಇಲ್ಲಿ ಧ್ವಜಾರೊಹಣ ಇತರೆ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

loading...