ಕಳೆಗುಂದಿದ್ದ ಗೋಡೆಗಳಿಗೆ ಮರು ಜೀವ

0
65

 

ಕನ್ನಡಮ್ಮ ಸುದ್ದಿ-ಯಲ್ಲಾಪುರ: ತಾಲೂಕಿನ ಸರಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕರು ಗುರುವಾರ ಪಟ್ಟಣದ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿಗಳ(ಬಿಆರ್‍ಸಿ) ಕಛೇರಿಯ ಕಂಪೌಂಡ ಗೋಡೆಗಳಿಗೆ ಹಸೆ ಚಿತ್ರ(ವರ್ಲಿ ಆರ್ಟ್)ಬಿಡಿಸುವ ಮೂಲಕ ಕಳೆಗುಂದಿದ್ದ ಗೋಡೆಗಳಿಗೆ ಕಲೆಯ ಮೆರಗು ನೀಡಿದ್ದಾರೆ.
ಇಂದಿನ ದಿನಗಳಲ್ಲಿ ಅನುದಾನವಿದ್ದರೂ ಸರಿಯಾಗಿ ಬಳಸಿಕೊಳ್ಳದೇ ಇರುವದನ್ನು ಕಾಣುಬಹುದಾಗಿದೆ ಆದರೆ ಬಿ ಆರ್‍ಸಿ ಕಛೇರಿಯ ಸಿಬ್ಬಂದಿಗಳು ಸರಕಾರದ ಯಾವದೇ ಅನುದಾನವಿಲ್ಲದೇ ಸ್ವಂತ ಖರ್ಚಿನಲ್ಲಿ ಗೋಡೆಗಳಿಗೆ ಬಣ್ಣ ಬಳಿದು ಕಲೆಯ ಅರಳುವಿಕೆಗೆ ಕೈಜೋಡಿಸಿದ್ದಾರೆ. ಉತ್ತಮ ಕಾರ್ಯದಿಂದ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಿಸನ್ ಯಲ್ಲಾಪುರ ವಾಟ್ಸ್‍ಪ್ ಕುಟುಂಬದಿಂದ ಆಯ್ ಬಿ ಉದ್ಯಾನವನ ವರ್ಲಿ ಚಿತ್ರದಿಂದ ಸುಂದರಗೊಳಿಸಿ ಅತ್ಯುತ್ತಮ ಕಾರ್ಯಕ್ರಮವನ್ನು ನೀಡಿದ್ದು ಪ್ರೇರಣೆಯಾಗಿ ಬಿ ಆರ್ ಸಿ ಕಚೇರಿಯನ್ನು ಸುಂದರಗೊಳಿಸಲು ಪಣತೊಟ್ಟು ಕಾರ್ಯನಿರತರಾಗಿದ್ದಾರೆ.ಯಾವದೇ ಉತ್ತಮ ಸಾರ್ಥಕ ಕಾರ್ಯಕ್ಕೆ ಎಲ್ಲರಿಂದಲೂ ಸ್ಪಂದನೆ ದೊರೆಯುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಬಿಸಗೋಡ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಕಲಾವಿದ ಸತೀಶ ಯಲ್ಲಾಪುರ ಮಾರ್ಗದರ್ಶನದಲ್ಲಿ ತಾಲೂಕಿನ ಚಿತ್ರಕಲಾ ಶಿಕ್ಷಕರು ಹಸೆ ಚಿತ್ರವನ್ನು ಬಿಡಿಸಿದರು

loading...