ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಸರಕಾರ ಪತನವಾಗಲಿದೆ: ಜಗದೀಶ ಶೆಟ್ಟರ್ || 05-12-2018

0
23

ಕಾಟಾಚಾರ ಹತ್ತು ದಿನ ಅಧಿವೇಶನ ಮಾಡುತ್ತಿದ್ದಾರೆ. ಮೂವತ್ತು ದಿನಗಳವರೆಗೆ ವಿಸ್ತರಣೆ ಮಾಡಬೇಕು. ಕಬ್ಬು ಬೆಳೆಗಾರ ಸಮಸ್ಯೆ ಕೇಳುತ್ತಿಲ್ಲ ಸ್ಪಂದನೆ ಮಾಡುತ್ತಿಲ್ಲ. ಸಕ್ಕರೆ ಇಲಾಖೆ ನನ್ನ ಬಳಿ ಇದ್ದಾಗ ಎಸ್ ಎಪಿ ಜಾರಿಗೆ ತಂದಿದೆ. ರೈತರ ಭವನೆ ಸಿಎಂ ಕುಮಾರಸ್ವಾಮಿಗೆ ಗೊತ್ತಿಲ್ಲ. ನನ್ನ ಅಧಿಕಾರಿದ ಅವಧಿಯಲ್ಲಿ ಮಾಡಿದ ಕಾನೂನುಗಳು ಇವತ್ತು ತಿದ್ದುಪಡೆ ಮಾಡಿ ನಿಷ್ಕ್ರಿಯಗೊಳಿಸಿದ್ದಾರೆ. ಲಕ್ಷಾಂತರ ಜನರು ಡಿ.೧೦ ರಂದು ರ್ಯಾಲಿಯಲ್ಲಿ ಬರಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ಐದಾರು ತಂಡಗಳಲ್ಲಿ ಬರ ಪೀಡಿತ ಪ್ರದೇಶ ಪ್ರವಾಸ ಮಾಡಿದ್ದೇವೆ. ನಾವು ನಿರ್ಧಾರ ಮಾಡಿದ ಬಳಿಕ ಸರಕಾರ ನಿರ್ಧಾರ ಮಾಡಿದರು. ಸರಕಾರ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಕುಮಾರಸ್ವಾಮಿ ಸುಳ್ಳು ಭರವಸೆ ನೀಡಿದ್ದರು

loading...