ಕೈ ಹಿಡಿದ ಫಲಿತಾಂಶ

0
101

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ರಾಷ್ಟç ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಸಮಿಫೈನಲ್ ಎಂದೇ ಬಿಂಬಿತವಾಗಿದ್ದ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಮತ್ತೊಂದು ಕಡೆ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೇರಿದ ರಾಹುಲ್ ವರ್ಷ ಪೂರ್ಣಗೊಂಡ ಬೆನ್ನಲೆ ಈ ಜಯ ಮತ್ತಷ್ಟು ಹುಮಸ್ಸು ನೀಡಿದೆ. ಮತದಾರ ಕಾಂಗ್ರೆಸ್ ಕೈ ಹಿಡಿದಿದ್ದಾನೆ. ಮಧ್ಯಪ್ರದೇಶ, ಮಿಜೋರಾಂ, ಛತ್ತಿಸಗಡ್ ಈ ಎಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದು ಕೇಕೆ ಹಾಕಿದೆ. ಮತ್ತೊಂದು ಕಡೆ ಬಿಜೆಪಿ ಸೋಲಿನಿಂದ ಮೋದಿ ಪಾಳ್ಯದಲ್ಲಿ ಆತಂಕ ಸೃಷ್ಠಿಯಾಗಿದೆ.ರಾಹುಲ್ ಅಂಡ್ ಟೀಂಗೆ ಮಹಾಮೈತ್ರಿಮಾಡಿಕೊಂಡು ಹೇಗಾದರೂ ಮಾಡಿ ಮೋದಿ ಸರಕಾರಕ್ಕೆ ಟಾಂಗ ನೀಡಬೆಕೆನ್ನುವ ಯೋಜನೆಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ. ರಾಜಸ್ಥಾನ ಮಧ್ಯಪ್ರದೇಶ ಈ ರಾಜ್ಯಗಳಲ್ಲಿ ಕಳೆದ ಭಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್‌ಗಿಂತ ಹೆಚ್ಚು ಸ್ಥಾನ ಗೆದ್ದು ಬಿಗಿತ್ತು. ಈ ಬಾರಿ ಸೋಲುಂಡಿದ್ದು ವಿರ‍್ಯಾಸ.ಆದರೆ ಈ ಬಾರಿ ಸೋಲಿಗೆ ಸಾಕಷ್ಟು ಕಾರಣಗಳು ಇವೆ. ಮುಂದೆ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿ ಬಿಜೆಪಿ ನಾಯಕರಿಗೆ ಕಾಡುತ್ತಿದೆ. ರಾಜಕೀಯ ಹೊರತಾಗಿಯೂ ಮೋದಿ ಸರಕಾರ ಬೇರೆ ಬೇರೆ ವಿಭಾಗಳಲ್ಲಿ ಭಾಗವಹಿಸಿ ಅಲ್ಲಿ ತಮ್ಮ ಹಿಡಿತ ಸಾಧಿಸುವ ಉದ್ದೇಶವು ಈ ಸೋಲಿಗೆ ಕಾರಣ ಅಂದರೂ ತಪ್ಪಿಲ್ಲ. ಸಿಬಿಐ ಅಧಿಕಾರಿಗಳ ಕಡ್ಡಾಯ ರಜೆ ನೀಡಿ ಕಳಸಿದ್ದು, ಜೊತೆಗೆ ಆರ್‌ಬಿಐ ಆಡಳಿತದಲ್ಲಿ ಹಸ್ತಕ್ಷೇಪ ಆಂತರಿಕ ತಿಕ್ಕಾಟ, ವೈಮನಸ್ಸು ಈ ಎಲ್ಲ ಬೆಳವಣಿಗೆಗಳು ಬಿಜೆಪಿ ಸೋಲಿಗೆ ಪರೊಕ್ಷ ಕಾರಣವಾಗಿದೆ. ರಾಜಸ್ಥಾನದಲ್ಲಿ ಭಾಜಪ ನಾಯಕರು ಪ್ರಚಾರ ಸಮಯದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹೇಳಿಕೆಗಳನ್ನು ಹೇಳಿದ್ದರು ಹಿಂದೂಳಿದ ಜನಾಂಗದವರ ಮತ ಪಡೆಯುವ ಉದ್ದೇಶದಿಂದ ಇಲ್ಲ ಸಲ್ಲದ ಹೇಳಿಕೆ ನೀಡಿದ್ದು ಭಾಜಪನಾಯಕ ಸೋಲಿಗೆ ಮತ್ತೊಂದು ಕಾರಣವಾಗಿದೆ. ಇದೆಲ್ಲರ ಲಾಭ ಪಡೆದ ಕಾಂಗ್ರೆಸ್ ಮತದಾರನ್ನು ತಮ್ಮತ್ತ ಸೆಳೆಯುವಂತೆ ಮಾಡಿತು. ಕಾಂಗ್ರೆಸ್ ಮುಕ್ತ ಭಾರತ ಎನ್ನುವ ಬಿಜೆಪಿ ಕನಸಿಗೆ ಮತ್ತೆ ಹಿನ್ನಡೆಯಾಗಿದೆ.ಮಹಾಮೈತ್ರಿ ಮಾಡಿಕೊಂಡು ಲೋಕಸಭೆಯಲ್ಲಿ ಭಾಜಪ ಸೋಲಿಸುವ ಕನಸಿಗೆ ಬುನಾದಿ ಸಿಕ್ಕಂತೆ ಆಗಿದೆ. ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಕಾರ್ಯ ಗಳು ಗರಿಗೇದರಿದ್ದು ಪಂಚ ರಾಜ್ಯಗಳ ಫಲಿತಾಂಶ ಮತ್ತಷ್ಟ ಬಲ ನೀಡಿದೆ. ರಾಹುಲ್ ಮತ್ತು ಅವರ ಮಹಾಮೈತ್ರಿಯಲ್ಲಿ ಸಂತಸದ ಸಂಚಲ ಮೂಡಿದೆ. ಈ ತಿಂಗಳ ನಂತರ ಮುಂಬರುವ ನೂತನ ವರ್ಷದಿಂದ ಲೋಕಸಭೆ ಚುನಾವಣೆಯ ಪ್ರಕ್ರಿಯೆ ಕಾರ್ಯ ನಡೆಯಲಿದೆ.ಇದೇ ಹುಮ್ಮಸ್ಸು ಕಾಂಗ್ರೆಸ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತನ್ನ ಪ್ರಣಾಳಿಕೆ ಸೇರಿದಂತೆ ಬುದ್ದಿವಂತ ನಡೆ ಇಡಲಿದ್ದು ಈಗ ಗೆದ್ದಿರುವ ರಾಜ್ಯಗಳಲ್ಲಿ ಸರಕಾರ ರಚನೆಯ ಪ್ರಕ್ರಿಯೆ ನಡೆಸಿದೆ.

loading...