ಸಾಲಮನ್ನಾ : ತಕ್ಷಣ ಸ್ವಯಂ ದೃಢೀಕರಣ ಪತ್ರ ಸಲ್ಲಿಸಲು ರೈತರಿಗೆ ಮನವಿ

0
19

ವಿಜಯಪುರ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಸಾಲಮನ್ನಾ ಯೋಜನೆಯ ಲಾಭ ಪಡೆಯಲು ಜಿಲ್ಲೆಯ ಸಾಲ ಪಡೆದಿರುವ ಅರ್ಹ ರೈತರು ರಾಷ್ಟಿçÃಕೃತ ವಾಣಿಜ್ಯ ಬ್ಯಾಂಕ್ ಶಾಖೆಯಲ್ಲಿ ತಕ್ಷಣ ಸ್ವಯಂ ದೃಢೀಕರಣ ಪತ್ರ ದಾಖಲಿಸುವಂತೆ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಅವರು ತಿಳಿಸಿದ್ದಾರೆ.
ರೈತರ ಸಾಲಮನ್ನಾ ಯೋಜನೆಯ ಪ್ರಗತಿ ಪರಿಶೀಲನೆಗಾಗಿ ಮಂಗಳವಾರ ಎಲ್‌ಡಿಎಂ ಕಚೇರಿಗೆ ಭೇಟಿ ನೀಡಿ, ರೈತರ ಸ್ವಯಂ ದೃಢೀಕರಣ ದಾಖಲೆಗೆ ಸಂಬಂಧಪಟ್ಟಂತೆ ಪರಿಶೀಲಿಸಲಾಗಿ, ಜಿಲ್ಲೆಯ ೧.೧೦ ಲಕ್ಷ ರೈತರಲ್ಲಿ ಈವರೆಗೆ ೫೮೦೦ ರೈತರು ಮಾತ್ರ ಸ್ವಯಂ ದೃಢೀಕರಣ ಪತ್ರ ಸಲ್ಲಿಸಿದ್ದು, ಬರುವ ಡಿ.೨೮ರೊಳಗೆ ಬಾಕಿ ಉಳಿದಿರುವ ಅರ್ಹ ರೈತರು ತಕ್ಷಣ ಸಂಬಂಧಪಟ್ಟ ಬ್ಯಾಂಕ್ ಶಾಖೆಗಳಲ್ಲಿ ಸ್ವಯಂ ದೃಢೀಕರಣ ಪತ್ರ ನೀಡುವಂತೆ ಅವರು ತಿಳಿಸಿದ್ದಾರೆ. ಸಾಲಮನ್ನಾ ಯೋಜನೆಯಡಿ ಜಿಲ್ಲೆಯ ಇನ್ನೂ ೮೫ ಬ್ಯಾಂಕ್‌ಗಳಲ್ಲಿ ಸ್ವಯಂ ದೃಢೀಕರಣ ಪತ್ರ ಸಲ್ಲಿಸದೇ ಇರುವುದರಿಂದ ಬ್ಯಾಂಕ್ ಕಾರ್ಯನಿರ್ವಹಣೆಯಲ್ಲಿ ಪ್ರಗತಿ ಕುಂಠಿತವಾಗುತ್ತಿದೆ.

ಸರ್ಕಾರದ ಆದೇಶದನ್ವಯ ಮೇಲ್ಕಂಡ ಬ್ಯಾಂಕ್ ಶಾಖೆಗಳಲ್ಲಿ ಸಾಲ ಪಡೆದ ರೈತರಲ್ಲಿ ಪ್ರತಿದಿನ ೪೦ ಜನ ರೈತರ ಸ್ವಯಂ ದೃಢೀಕರಣ ಪತ್ರ ದಾಖಲಿಸಲು ವ್ಯವಸ್ಥೆ ಮಾಡಲಾಗಿದೆ. ಅದರಂತೆ ಉಳಿದ ರೈತರಿಗೆ ಮುಂದಿನ ದಿನದ ಟೋಕನ್ ಸಹ ನೀಡಲಾಗುತ್ತಿದ್ದು, ತಕ್ಷಣ ಅರ್ಹ ರೈತರು ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಇದೇ ಡಿ.೨೮ರೊಳಗೆ ಸ್ವಯಂ ದೃಢೀಕರಣ ಪತ್ರ ನೀಡಿ, ಸಾಲಮನ್ನಾ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

loading...