ಬಡವರಿಗೆ ಆಶ್ರಯ ಮನೆ ಕಲ್ಪಿಸಲು ಶಾಸಕರಿಗೆ ಮನವಿ

0
21

ಕನ್ನಡಮ್ಮ ಸುದ್ದಿ-ರಾಮದುರ್ಗ: ರಾಮದುರ್ಗ ನಗರದಲ್ಲಿ ವಾಸವಾಗಿರುವ ಕಡು ಬಡವರಿಗೆ ಆಶ್ರಯ ಮನೆಗಳನ್ನು ಕಲ್ಪಿಸಿಕೊಡಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ಕರ್ನಾಟಕ ರಾಜ್ಯ ಬಡವರ ಹಿತರಕ್ಷಣಾ ವೇದಿಕೆಯ ತಾಲೂಕಾ ಅಧ್ಯಕ್ಷೆ ಮಹಾದೇವಿ ಬಂಡಿವಡ್ಡರ ಮನವಿ ಸಲ್ಲಿಸದರು.
ರಾಮದುರ್ಗ ನಗರದಲ್ಲಿ ಸಾಕಷ್ಟು ಬಡವರಿಗೆ ಮನೆಗಳಿಲ್ಲದೆ ನಿರಾಶ್ರಿತರಾಗಿ ಅಲೆದಾಡುತ್ತಿದ್ದಾರೆ ಅವರಿಗೆ ಮನೆಗಳು ದೊರಕುತ್ತಿಲ್ಲ ಕೆಳೆದ 5-6 ವರ್ಷಗಳಿಂದ ಹಲವಾರು ಬಾರಿ ತಹಶೀಲ್ದಾರ ಹಾಗೂ ಪುರಸಭೆಯ ಅಧಿಕಾರಿಗಳಿಗೆ ಕಡು ಬಡವರನ್ನು ಗುರ್ತಿಸಿ ಆಶ್ರಯ ಮನೆಗಳನ್ನು ನೀಡಬೇಕೆಂದು ಮನಿವಿ ಮಾಡಿಕೊಂಡರು ಮನೆಗಳನ್ನು ನೀಡುತ್ತಿಲ್ಲಾ ಮತ್ತೊಮ್ಮೆ ತಮ್ಮ ಮೂಲಕ ಬಡವರಿಗೆ ಆಶ್ರಯ ಮನೆಗಳನ್ನು ಕಲ್ಪಿಸಿಕೊಡಬೇಕು. ಈ ಸಂದರ್ಬದಲ್ಲಿ ಫಕೀರಪ್ಪ ಹೊಳೇನ್ನವರ, ಮಹಾನಿಗಂಪ್ಪ ಹೊಳೆನ್ನವರ, ಕೃಷ್ಣಪ್ಪ ಭಜಂತ್ರಿ, ಪಾಂಡುಗೌಡ ಪಾಟೀಲ, ವೆಂಕನಗೌಡ ಪಾಟೀಲ ಸೇರಿದಂತೆ ಮುಂತಾದವರು ಇದ್ದರು.

loading...