ರಮೇಶ್ ಬಂಡಾಯಕ್ಕೆ ಬಲ ನೀಡದಬೆಂಬಲಿಗರು || ಗುರುವಿಗೆ ತಿರುಮಂತ್ರ ಹಾಕಿದ ಶ್ರಿಮಂತಪಾಟೀಲ, ಮಹೇಶ ಕುಮಠಳ್ಳಿ ||

0
402

ರಮೇಶ್ ಬಂಡಾಯಕ್ಕೆ ಬಲ ನೀಡದಬೆಂಬಲಿಗರು

|| ಗುರುವಿಗೆ ತಿರುಮಂತ್ರ ಹಾಕಿದ ಶ್ರಿಮಂತಪಾಟೀಲ, ಮಹೇಶ ಕುಮಠಳ್ಳಿ ||

ಕನ್ನಡಮ್ಮ ಸುದ್ದಿ

ಬೆಳಗಾವಿ ೨೮: ತಮ್ಮ ಹಿಂದಿರುವಬೆಂಬಲಿಗರನ್ನೆàನಂಬಿಕೊಂಡು ಸಮಿಶ್ರಸರಕಾರಕ್ಕೆ ತೊಡೆ ತಟ್ಟಿರುವ ರಮೇಶಜಾರಕಿಹೊಳಿ ಅವರ ಬೆನ್ನಿಗೆ ಆಪ್ತರೆನಿಲ್ಲದಿರುವುದು ಅವರ ಭವಿಷ್ಯದ ಆಗು-ಹೋಗುಗಳಿಗೆ ಬಹುದೊಡ್ಡ ಸಂಚಕಾರತಂದೊಡ್ಡಿದೆ.

ಹೌದು, ಕಳೆದ ವಿಧಾನಸಭೆ ಚುನಾವಣೆಯಲ್ಲಿಕಮಲದ ಕೋಟೆಯಲ್ಲಿ ಕೈ ಮೇಲಾಗಿಸಲುರಮೇಶ ಜಾರಕಿಹೊಳಿ ತಮ್ಮ ಪ್ರತಿಷ್ಠೆಪಣಕ್ಕಿಟ್ಟು ಅಥಣಿ ಹಾಗೂ ಕಾಗವಾಡಕ್ಷೆÃತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಆಯ್ಕೆಗೆ ರಮೇಶ ಶ್ರಮಿಸಿದ್ದ ಪರಿಣಾಮ ಈಎರಡು ಕ್ಷೆÃತ್ರಗಳಿಂದ ಆಯ್ಕೆಯಾದಶ್ರಿÃಮಂತ ಪಾಟೀಲ, ಮಹೇಶ ಕುಮಠಳ್ಳಿ ಈಇಬ್ಬರು ರಮೇಶ ಜಾರಕಿಹೊಳಿ ಅವರಅಪ್ಪಟ ಬೆಂಬಲಿಗರೆಂದೇ ಜಿಲ್ಲೆಯಲ್ಲಿಗುರುತಿಸಲ್ಪಟ್ಟಿದ್ದರು.

ಕಳೆದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿಸಹೋದರ ಸತೀಶ ಜಾರಕಿಹೊಳಿ ಅವರಿಂದತೆರವಾದ ಸಚಿವ ಸ್ಥಾನಕ್ಕೆ ರಮೇಶಆಯ್ಕೆಯಾದ ಬಳಿಕ ಅಧಿಕಾರವಹಿಸಿಕೊಂಡರಮೇಶ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಬಲವರ್ಧನೆಗೆ ಸಾಕಷ್ಟುಕಾರ್ಯಮಾಡಿದ್ದರು. ಆದರೆ ಇತ್ತಿÃಚಿಗೆರಮೇಶ ಅವರ ವಿರುದ್ಧ ಕೇಳಿ ಬಂದ ಕೆಲಆರೋಪಗಳು ಹಾಗೂ ಅವರು ಕೈಕೊಂಡಕೆಲ ನಿರ್ಧಾರಗಳು ಅವರನ್ನುಮಂತ್ರಿಮಂಡಲದಿಂದಲೇ ದೂರಸರಿಯುವಂತೆ ಮಾಡಿದ್ದು, ಇದರಿಂದಅತೃಪ್ತರಾಗಿರುವ ರಮೇಶ ಜಾರಕಿಹೊಳಿಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದೇಅಜ್ಞಾತ ಸ್ಥಳಕ್ಕೆ ತೆರಳಿರುವುದು ಹಲವುಅನುಮಾನ ಹುಟ್ಟುಹಾಕಿದೆ.

ಜಾರಕಿಹೊಳಿ ಜಗಳಕ್ಕೆ ಇತರರು ಕಂಗಾಲು:

ಕಳೆದ ಐದು ವರ್ಷಗಳ ಕಾಂಗ್ರೆಸ್ ಸರಕಾರದಅವಧಿ ಸೇರಿದಂತೆ ಇಲ್ಲಿಯವರೆಗೆ ಜಿಲ್ಲೆಯಲ್ಲಿಜಾರಕಿಹೊಳಿ ಸಹೋದರರು ತಮ್ಮದೇಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತ ಸಾಗಿದ್ದು, ಐದುವರ್ಷ ಕಳೆದರೂ ನಿಲ್ಲದ ಜಾರಕಿಹೊಳಿಸಹೋದರರಿಬ್ಬರ ಕಾಳಗಕ್ಕೆ ಜಿಲ್ಲೆಯಇನ್ನುಳಿದ ಕಾಂಗ್ರೆಸ್ ಶಾಸಕರು, ನಾಯಕರುರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿಆಟಕ್ಕುಂಟು-ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿತಂದೊಡ್ಡಿದ್ದು, ಇದರಿಂದ ಜಿಲ್ಲೆಗೆಸಿಗಬಹುದಾದ ಹೆಚ್ಚಿನ ಸಚಿವ ಸ್ಥಾನ ಹಾಗೂನಿಗಮ ಮಂಡಳಿ ಹುದ್ದೆಗಳು ದೊರೆಯದೇಇದ್ದದ್ದರಲ್ಲಿಯೇ ತೃಪ್ತಿ ಕಾಣಬೇಕಾದಅನಿವಾರ್ಯತೆ ಜಿಲ್ಲೆಯ ಕಾಂಗ್ರೆಸ್ಮುಖಂಡರದ್ದಾಗಿದೆ.

ಬಲ ನೀಡದ ಬೆಂಬಲಿಗರು

ಇತ್ತಿÃಚಿಗೆ ಸಚಿವ ಸ್ಥಾನ ಕಳೆದುಕೊಂಡರಮೇಶ ಜಾರಕಿಹೊಳಿ ತಮ್ಮ ತಾಕತ್ತುಸರಕಾರಕ್ಕೆ ತೋರಿಸಬೇಕೆಂಬತವಕದಲ್ಲಿರುವಾಗಲೇ ಅಥಣಿ ಮಹೇಶಕುಮಠಳ್ಳಿ ಹಾಗೂ ಕಾಗವಾಡ ಶಾಸಕಶ್ರಿÃಮಂತ ಪಾಟೀಲ ಕಾಂಗ್ರೆಸ್ ಪಕ್ಷಬಿಡುವದಿಲ್ಲ ಎಂದು ಸ್ಪಷ್ಟಪಡಿಸಿರುವುದುರಮೇಶ ಜಾರಕಿಹೊಳಿ ಅವರ ಕೈಕೊಳ್ಳುವನಿರ್ಧಾರಗಳಿಗೆ ಅಡ್ಡಿಯಾಗಿದ್ದು, ನಾನು ಕೈಮಾಡಿದರೆ ನನ್ನ ಹಿಂದೆ ಬರುತ್ತಾರೆಂದುನಂಬಿದ್ದ ಜಾರಕಿಹೊಳಿ ಅವರಿಗೆ ಅವರಆಪ್ತರೇ ಕಹಿ ನಿರ್ಧಾರ ತೆಗೆದುಕೊಂಡಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವವಿಧಾನ ಪರಿಷತ್ ವಿವೇಕರಾವ್ ಪಾಟೀಲಅವರು ರಮೇಶ ಜಾರಕಿಹೊಳಿ ಅವರಿಗೆಬೆಂಗಾವಲಾಗಿ ನಿಂತಿದ್ದಾರೆ. ತಮಗೆರಾಜಕೀಯ ಗುರುವಾಗಿದ್ದ ರಮೇಶಜಾರಕಿಹೊಳಿ ಅವರಿಗೆ ತಿರುಗಿಬಿದ್ದಿದ್ದಾರೆನ್ನುವ ಮಾತುಗಳು ಕೇಳಿಬಂದಿವೆ.

ಮಾಸ್ಟರ ಮೈಂಡ:

ಅಂದುಕೊಂಡದ್ದನೆಲ್ಲ ಸೈಲೆಂಟ್ ಆಗಿಸಾಧಿಸುವ ಮಾಸ್ಟರ ಮೈಂಡ್ ಸತೀಶಜಾರಕಿಹೊಳಿ ಅವರು ಜಿಲ್ಲೆಯ ಎಲ್ಲ ಕಡೆಸಂಚರಿಸಿ ಕಾಂಗ್ರೆಸ್ ಬಿಟ್ಟು ಹೋಗದಂತೆಶಾಸಕರಿಗೆ ಮನವಿ ಮಾಡಿದ್ದು, ಸತೀಶ ಪರಬ್ಯಾಟ ಬೀಸಿರುವ ಕಾಂಗ್ರೆಸ್ ಶಾಸಕರು, ಅಧಿಕಾರ ಕಳೆದುಕೊಂಡ ರಮೇಶಜಾರಕಿಹೊಳಿ ಅವರ ನಿರ್ಧಾರದಿಂದ ದೂರಉಳಿಯುವ ನಿರ್ಧಾರಮಾಡಿದ್ದಾರೆನ್ನಲಾಗಿದೆ. ಇದರಿಂದಾಗಿರಮೇಶ ಬಂಡಾಯಕ್ಕೆ ಬೆಂಬಲದೊರೆಯದಂತೆ ಕಾರ್ಯತಂತ್ರ ರೂಪಿಸುವಲ್ಲಿಸತೀಶ ಯಶಸ್ವಿಯಾಗಿದ್ದಾರೆ.

ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಜಾರಕಿಹೊಳಿಸಹೋದರರಿಬ್ಬರು ಕೈ ಕಮಾಂಡ ಪರ-ವಿರೋಧ ಕಾರ್ಯದಲ್ಲಿ ತೊಡಗಿರುವುದುಇತರ ರಾಜಕೀಯ ನಾಯಕರಿಗೆ ಮಗ್ಗುಲಮುಳ್ಳಾಗಿ ಪರಿಣಮಿಸಿದ್ದು, ರಮೇಶ ಪರನಿಲ್ಲುತ್ತಾರೆನ್ನಲಿದ್ದ ಶಾಸಕರು ಕೈ ಕಮಾಂಡಆದೇಶಕ್ಕೆ ತಲೆಬಾಗಿದ್ದು, ರಮೇಶ ಕೈಕೊಳ್ಳುವಯಾವ ನಿರ್ಧಾರ ಕೈಕೊಳ್ಳುತ್ತಾರೆಂಬುದನ್ನುಕಾದುನೋಡಬೇಕಿದೆ.

loading...