ಗೋಕಾಕದಲ್ಲಿ ಪ್ರತ್ಯಕ್ಷವಾದ ರಮೇಶ ; ಮಾಧ್ಯಮದವರ ಮೇಲೆ‌ ಕೆಂಡಾಮಂಡಲ

0
55

ಕನ್ನಡಮ್ಮ ಸುದ್ದಿ- ಬೆಳಗಾವಿ: ಮೈತ್ರಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಬಳಿಕ ಅಸಮಾಧಾನಗೊಂಡ ರಮೇಶ ಜಾರಕಿಹೊಳಿ ಕಣ್ಮರೆಯಾಗಿದ್ದರು,ಆದರೆ ಇಂದು ಬೆಳ್ಳಿಗೆ ಗೋಕಾಕದಲ್ಲಿ ಪ್ರತ್ಯಕ್ಷವಾಗಿದ್ದು,ಸುದ್ದಿಗೆಂದು ತೆರಳಿದ ಮಾಧ್ಯಮದವರ‌ ಮೇಲೆ ಕೆಂಡಾಮಂಡಲರಾಗಿದ್ದಾರೆ.
ಬೆಳಗಾವಿ ಸಾಹುಕಾರ್ ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ‌ ನೀಡುವ ಮೂಲಕ ಮೈತ್ರಿ ಸರ್ಕಾರ ಬಿಳಿಸುವ ಬೇದರಿಕೆ ಹಾಕುತ್ತಿದ್ದ ರಮೇಶನ ಬಾಂಬ್ ಟುಸ್ ಆಗಿದೆ. ದೆಹಲಿಗೆ ತೆರಳಿ ಬಿಜೆಪಿ ಬಾಗಿಲು ತಟ್ಟಲು ಹೊದ ರಮೇಶ 20 ಶಾಸಕರೊಂದಿಗೆ ಬಿಜೆಪಿಗೆ ಬಂದರೆ ಸ್ವಾಗತ ಎಂದು ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಅಮಿತ್ ಶಾ ಕಡಾಕಂಡಿತವಾಗಿ ಹೇಳಿದರ ಹಿನ್ನಲೆ ಜಿಲ್ಲೆಗೆ ಮರಳಿದ್ದಾರೆ.
ಏನು ಮಾಡಲು ಆಗಲಿಲ್ಲವಲ್ಲ ಎನ್ನುವ ರಮೇಶಗೆ ದವಡೆ ಹಿಟ್ಟನ್ನು ಮಾಧ್ಯಮದವರ‌ ಮೇಲೆ ತೊರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಗೋಕಾಕ್​ ನಗರದ ತಮ್ಮ ನಿವಾಸದಲ್ಲಿ ಪ್ರತ್ಯಕ್ಷರಾದ ರಮೇಶ್​ ಜಾರಕಿಹೊಳಿಯನ್ನು ‌ಮಾತನಾಡಿಸಲು ಹೋದ ಮಾಧ್ಯಮದವರನ್ನು ಕಂಡು‌ ಆಕ್ರೋಶ ಹೊರ ಹಾಕಿದ್ದಾರೆ.

loading...