ಮಾದ್ಯಮದವರ ಮೇಲೆ ರಮೇಶ ಜಾರಕಿಹೋಳಿ ದರ್ಪ ಸರಿಯಲ್ಲ : ಮಾಜಿ ಸಚಿವರ ವರ್ತನೆಗೆ ಬಿ.ವಾ.ವಿಜೆಯೆಂದ್ರ ಪ್ರತಿಕ್ರಿಯೆ

0
63

ಮಾದ್ಯಮದವರ ಮೇಲೆ ರಮೇಶ ಜಾರಕಿಹೋಳಿ ದರ್ಪ ಸರಿಯಲ್ಲ : ಮಾಜಿ ಸಚಿವರ ವರ್ತನೆಗೆ ಬಿ.ವಾ.ವಿಜೆಯೆಂದ್ರ ಪ್ರತಿಕ್ರಿಯೆ

ಕನ್ನಡಮ್ಮ ಸುದ್ದಿ-ಬೆಳಗಾವಿ : ಸಚಿವ ಸ್ಥಾನದಿಂದ ಕೋಕ್ ನೀಡಿದ ಹಿನ್ನಲೆ ದೋಸ್ತಿ ಸರಕಾರದಿಂದ ದೂರ ಉಳಿದಿರುವ ಮಾಜಿ ಸಚಿವ ರಮೇಶ ಜಾರಕಿಹೋಳಿ ಭೇಟಿಯಾಗಲು ಹೋಗಿದ್ದ ಮಾದ್ಯಮದವರಿಗೆ ನಿಂದಿಸಿ ದರ್ಪ ಮೆರೆದಿರುವ ರಮೇಶ ಜಾರಕಿಹೋಳಿ ವರ್ತನೆಗೆ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವಾ.ವಿಜೆಯೆಂದ್ರ ಪ್ರತಿಕ್ರಿಯೆ ನೀಡಿ ಮಾಜಿ ಸಚಿವರ ವರ್ತನೆ ಸರಿಯಲ್ಲ ಎಂದಿದ್ದಾರೆ .

ಇಂದು ವಿಜಯ ಲಕ್ಷ್ಯ ೨೦೧೯ ಯಾತ್ರೆ ಅಂಗವಾಗಿ ನಗರದಲ್ಲಿ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿ ನಂತರ ಮಾದ್ಯಮದೊಂದಿಗೆ ಮಾತನಾಡಿದ ವಿಜೆಯೆಂದ್ರ ಯಾರೆಯಾಗಲೆ ಮಾದ್ಯಮದವರ ಬಗ್ಗೆ ಸರಿಯಾಗಿ ವರ್ತನೆ ಮಾಡಬೇಕು ,ಶಾಸಕಾಂಗ ,ನ್ಯಾಯಾಂಗ ,ಕಾರ್ಯಾಂಗದ ನಾಲ್ಕುನೇ ಅಂಗವೆ ಮಾದ್ಯಮ ಸಮಾಜದ ತಪ್ಪು ಸರಿ ಬಗ್ಗೆ ಬೆಳಕು ಚೆಲ್ಲುವ ಮಾದ್ಯಮದ ಬಗ್ಗೆ ಗೌರವಯಿರಬೇಕೆಂದು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಮಾದ್ಯಮದವರನ್ನು ಬಹಳ ಗೌರವವಾಗಿ ನಡೆಸಿಕೊಂಡಿದ್ದಾರೆ.ಯಾರೆಯಾದರೂ ಮಾದ್ಯಮದ ಜೊತೆ ಸರಿಯಾಗಿ ವರ್ತಿಸಬೇಕು ಎಂದು ಹೇಳಿದರು .

loading...