ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬಿಗ್ ಸ್ಕೊರ್ ಕಲೆ ಹಾಕಿದ ಭಾರತ, ಪೂಜಾರಾ ೧೯೪, ಪಂತ್ ೧೫೯*: ೬೨೨/೭ಕ್ಕೆ ಕೊಹ್ಲಿ ಪಡೆ ಡಿಕ್ಲೇರ್​

0
20

ಸಿಡ್ನಿ: ಸಿಡ್ನಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಏಳು ವಿಕೆಟ್ ನಷ್ಟಕ್ಕೆ ೬೨೨ ರನ್ ಕಲೆ ಹಾಕಿ ಡಿಕ್ಲೆÃರ್ ಮಾಡಿಕೊಂಡಿದೆ.
ತನ್ನ ಮೊದಲ ಇನಿಂಗ್ಸ್ ಆರಂಭಿಸಿರುವ ಆಸ್ಟೆçÃಲಿಯಾ ವಿಕೆಟ್ ನಷ್ಟವಿಲ್ಲದೆ ೧೫ ರನ್ ಮಾಡಿದೆ. ಮೂರನೇ ದಿನಕ್ಕೆ ಹ್ಯಾರಿಸ್ ಹಾಗೂ ಖ್ವಾಜಾ ಕ್ರಿಜ್ ಕಾಯ್ದುಕೊಂಡಿದ್ದಾರೆ.
ಚೇತೇಶ್ವರ್​ ಪೂಜಾರಾ ೧೯೪ ರನ್​, ವಿಕೆಟ್​ ಕೀಪರ್​ ರಿಷಬ್​ ಪಂತ್​ ಅಜೇಯ ೧೫೯ ರನ್​ಗಳ ನೇರವಿನಿಂದ ಮೊದಲ ಇನ್ನಿಂಗ್ಸ್​​ನಲ್ಲಿ ಬೃಹತ್​ ೬೨೨ ರನ್​ಗಳಿಕೆ ಮಾಡಿದೆ. ೮೧ರನ್​ ಮಾಡಿದ್ದ ರವೀಂದ್ರ ಜಡೇಜಾ ವಿಕೆಟ್​ ಬೀಳುತ್ತಿದ್ದಂತೆ ನಾಯಕ ಕೊಹ್ಲಿ ಡಿಕ್ಲೇರ್​ ಮಾಡಿಕೊಂಡರು.
ಮೊದಲ ದಿನ ೪ವಿಕೆಟ್​ನಷ್ಟಕ್ಕೆ ೩೦೩ರನ್​ಗಳಿಸಿದ್ದ ಟೀಂ ಇಂಡಿಯಾ ಇಂದು ಬ್ಯಾಟಿಂಗ್​ ಮುಂದುವರಿಸಿತು. ೧೩೦ರನ್​ಗಳಿಸಿದ್ದ ಪೂಜಾರಾ ಹಾಗೂ ೩೯ ರನ್​ ಬಾರಿಸಿದ್ದ ವಿಹಾರಿ ಇಂದು ಬ್ಯಾಟಿಂಗ್​ ಮುಂದುವರೆಸಿದ್ರು. ೪೨ರನ್​ಗಳಿಸಿದ್ದ ವೇಳೆ ವಿಹಾರಿ ನೇಥನ್​ ಲಿಯಾನ್​ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದ್ರು.
ಇದಾದ ಬಳಿಕ ಪೂಜಾರಿ ಜತೆ ಮೈದಾನ ಹಂಚಿಕೊಂಡ ವಿಕೆಟ್​ ಕೀಪರ್​ ರಿಷಭ್​​ ಪಂತ್​ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದ್ರು. ಇವರಿಬ್ಬರು ಸೇರಿ ಎದುರಾಳಿ ಬೌಲರ್​ಗಳನ್ನ ಹಿಗ್ಗಾಮುಗ್ಗಾ ದಂಡಿಸಿದ್ರು. ಇದೇ ವೇಳೆ ದ್ವಿ ಶತಕದ ಸನಿಹದಲ್ಲಿ ಪೂಜಾರಾ ೧೯೩ರನ್​ಗಳಿಸಿದ್ದ ವೇಳೆ ವಿಕೆಟ್​ ಒಪ್ಪಿಸಿದರು. ಈ ಮೂಲಕ ಕೇವಲ ಏಳು ರನ್​ಗಳಿಂದ ಡಬಲ್​ ಸೆಂಚುರಿ ಮಿಸ್​ ಮಾಡಿಕೊಂಡರು.
ಮತ್ತೊಂದೆಡೆ, ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಪಂತ್, ಟೆಸ್ಟ್ ಕ್ರಿಕೆಟ್‌ನಲ್ಲಿ ೨ನೇ ಹಾಗೂ ಆಸೀಸ್ ನೆಲದಲ್ಲಿ ಚೊಚ್ಚಲ ಶತಕದ ಸಾಧನೆ ಮಾಡಿದರು. ಇವರಿಗೆ ರವೀಂದ್ರ ಜಡೇಜಾ ಅದ್ಭುತ ಸಾಥ್​ ನೀಡಿದ್ರು. ೮೧ರನ್​ಗಳಿಕೆ ಮಾಡಿದ್ದ ವೇಳೆ ಜಡೇಜಾ ವಿಕೆಟ್​ ಬೀಳುತ್ತಿದ್ದಂತೆ ಟೀಂ ಇಂಡಿಯಾ ಇನ್ನಿಂಗ್ಸ್ ಡಿಕ್ಲೇರ್​ ಮಾಡಿಕೊಂಡರು. ಈ ವೇಳೆ, ಟೀಂ ಇಂಡಿಯಾ ೭ವಿಕೆಟ್​ನಷ್ಟಕ್ಕೆ ೬೨೨ರನ್​ ಸೇರಿಸಿತ್ತು. ನಿನ್ನೆ ಆರಂಭಿಕ ಆಟಗಾರ ಮಯಾಂಕ್​ ಅಗರವಾಲ್​ ೭೭ರನ್ ಗಳಿಸಿದ್ದರು.
ಇನ್ನೊಂದೆಡೆ ರಿಷಭ್​​ ಪಂತ್​ ಅಜೇಯ ೧೫೯ ರನ್​ಗಳಿಕೆ ಮಾಡಿದ್ರು. ಆಸೀಸ್ ಪರ ನೇಥನ್ ಲಿಯಾನ್​ ೪, ಜೋಶ್ ಹೇಜಲ್​ವುಡ್​​ ೨ ಹಾಗೂ ಮಿಚಲ್ ಸ್ಟಾರ್ಕ್ಸ್​ ೧ ವಿಕೆಟ್ ಪಡೆದುಕೊಂಡರು.

loading...