ಬಸವನಕೋಳ ನೀರು ಶುದ್ಧೀಕರಣ ಘಟಕ ಅವ್ಯವಹಾರ: ಏಳು ದಿನದೊಳಗೆ ತನಿಖೆ ನಡೆಸಿ ವರದಿ ನೀಡುವಂತೆ‌ ಮೇಯರ ಆದೇಶ

0
53
ಕನ್ನಡಮ್ಮ ಸುದ್ದಿ- ಬೆಳಗಾವಿ:
ನಗರದ ಬಸವನ ಕೋಳ ಜಲಶುದ್ದೀಕರಣ ಘಟಕ ಸ್ಥಾಪನೆಯಲ್ಲಿ ಅವ್ಯವಹಾರ ನಡೆದಿರುವ‌ ಆರೋಪ ಕೆಳಿ ಬಂದಿರುವ ಹಿನ್ನಲೆಯಲ್ಲಿ ಆಯುಕ್ತರ ನೇತೃತ್ವದಲ್ಲಿ ಸಮಿತಿಯಿಂದ ತನಿಖೆ  ನಡೆಸಿ ವರದಿ ನೀಡುವಂತೆ ಮೇಯರ ಬಸಪ್ಪಾ‌ ಚಿಕ್ಕಲದಿನ್ನಿ ಆದೇಶ ನೀಡಿದರು.
ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ನಡೆದ ಪರಿಷತ್ ಸಭೆಯಲ್ಲಿ ಸದಸ್ಯ ದಿನೇಶ ನಾಶಿಪುಡಿ ಬಸವನಕೋಳ ಶುದ್ಧೀಕರಣ ಘಟಕ ನಿರ್ಮಾಣದಲ್ಲಿ ಕಳಪೆ‌ ಕಾಮಗಾರಿಯಾಗಿದೆ. ಬೃಹತ್ ಮೊತ್ತದ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿ. ಘಟಕ ಕಾರ್ಯನಿವರ್ಹಿಸುತ್ತಿಲ್ಲ ಆದರು ಸಹ  ಸಹ ಬಿಲ್‌ ನೀಡಲಾಗಿದೆ. ಆದ್ದರಿಂದ‌ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಅಧಿಕಾರಿ‌ ಚಂದ್ರಶೇಖರ ಸಭೆಯಲ್ಲಿ ಮಾತನಾಡಿ, 3.60 ಕೋಟಿ ಪ್ರಾಜೆಕ್ಟನಡಿ ಈಗಾಗಲೇ 2.09ಹಣ ಈಗಾಗಲೇ ಖರ್ಚಾಗಿದೆ. ಈಗ ತಾಂತ್ರಿಕ ತೊಂದರೆಯಿಂದ ಸ್ಥಗಿತವಾಗಿದೆ.ಕೆಲಸ ನಿರ್ವಹಿಸುತ್ತಿಲ್ಲವೆಂದು ಸಭೆಗೆ ತಿಳಿಸಿದರು. ಬಸವನಕೊಳ್ಳ ಕೇಂದ್ರ ತಾಂತ್ರಿಕವಾಗಿ ಚಾಲ್ತಿಯಿಲ್ಲದಿದ್ದರೂ ಗುತ್ತಿಗೆದಾರನಿಗೆ ಹಣ ಪಾವತಿಯಾದದ್ದು ಸಭೆಗೆ ದಿಗ್ಭ್ರಮೆ ಮೂಡಿಸಿತು.
ಕಳೆದ 16 ತಿಂಗಳಿಂದ ಜಲಶುದ್ಧೀಕರಣ ಘಟಕ ದುರಸ್ತಿಯಲ್ಲಿರುವುದು ಗಮನಕ್ಕೆ ಬಂತು. ತಾಂತ್ರಿಕೇತರ ಮ್ಯಾನ್ಯುಲ್ ಮೋಡ್ ನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಜಲಮಂಡಳಿ ಅಧಿಕಾರಿ ಸಭೆಗೆ ತಿಳಿಸಿದರು. ಜನೇವರಿ 10ರೊಳಗೆ ಘಟಕ ದುರಸ್ತಿ ಭರವಸೆ ಅಧಿಕಾರಿ ನೀಡಿದರು.
ಶಾಸಕ ಅನಿಲ ಬೆನಕೆ ಮಾತನಾಡಿ, ಸಿಬ್ಬಂಧಿ ಕೊರತೆ, ತಾಂತ್ರಿಕ ಸೌಲಭ್ಯಗಳ ಕೊರತೆ, ಅಧಿಕಾರಿಗಳ ಕೊರತೆ ಆಗಿ ಜನರಿಗೆ ನೀರು ದೊರಕುತ್ತಿಲ್ಲ ಎಂದು ಆರೋಪಿಸಿದರು.
7ಲಕ್ಷ ಜನಸಂಖ್ಯೆಯ ಜನತೆಗೆ ಶುದ್ದ ಕುಡಿಯುವ ನೀರಿಗೆ ಎರಡನೇ ಘಟಕ ಬಸವನಕೊಳ್ಳದಲ್ಲಿ ಪ್ರಾರಂಭಿಸಲಾಯಿತು. ಆದರೆ ಅದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಭೆ ಅಸಮಧಾನ ವ್ಯಕ್ತಪಡಿಸಿತು.
ಇದೇ ವೇಳೆ ಎಲ್ಲ ಸದಸ್ಯರ ವಿಷಯಗಳ ಗಮನಸಿದ ನಂತರ ಬಸವಕೋಳ ಶುದ್ಧೀಕರಣ ಘಟಕದ ಬಗ್ಗೆ ಅವ್ಯವಹಾರ ಆರೋಪ‌ಕೇಳಿ ಬಂದಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಿತಿಯನ್ನು ರಚಿಸಿ ತನಿಖೆ ನಡೆಸುವ ಮೂಲಕ ಏಳು ದಿನದಲ್ಲಿ ವರದಿ ಸಲ್ಲಿಸಬೇಕೆಂದು ಆದೇಆ ನೀಡಿದರು.
ಈ ಸಂದರ್ಭದಲ್ಲಿ  ಶಾಸಕರಾದ , ನಗರ ಸೇವಕರು ಹಾಜರಿದ್ದರು.
loading...