ಪತ್ರಕರ್ತನ ಕೊಲೆಗೆ ಯತ್ನಿಸಿದವನಿಗೆ ೮ ವರ್ಷ ಜೈಲು

0
5
ಪತ್ರಕರ್ತನ ಕೊಲೆಗೆ ಯತ್ನಿಸಿದವನಿಗೆ ೮ ವರ್ಷ ಜೈಲು
ಕನ್ನಡಮ್ಮ ಸುದ್ದಿ
ಚಿಕ್ಕೊಡಿ ೦೩: ಕೊಲೆ ಮಾಡುವ ಉದ್ದೆÃಶದಿಂದ ಪತ್ರಕರ್ತನಿಗೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆಗೆ ಪ್ರಯತ್ನಿಸಿದ ವ್ಯಕ್ತಿಯೋರ್ವನಿಗೆ ಚಿಕ್ಕೊÃಡಿಯ ೭ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಹಾಂತಪ್ಪ ಎ.ಡಿ. ೮ ವರ್ಷ ಸಾದಾ ಶಿಕ್ಷೆ ೨೦ ಸಾವಿರ ರೂಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ ಎಂದು ಚಿಕ್ಕೊಡಿಯ ಸರ್ಕಾರಿ ಸಾರ್ವಜನಿಕ ಅಭಿಯೋಜಕ ಎಸ್.ಆರ್.ಪಾಟೀಲ ತಿಳಿಸಿದ್ದಾರೆ.
ಅಥಣಿ ಪಟ್ಟಣದ ಆರೋಪಿ ಪರುಶರಾಮ ಅಪ್ಪಾಸಾಬ ಗಡದೆ(೨೫ವ) ಎಂಬುವವರು  ತಮ್ಮ ಗೆಳೆಯ ಪತ್ರಿಕೆಯೊಂದರ  ಸಂಪಾದಕ ಮಹೇಂದ್ರ ರಾಜಂಗಳೆ ಇವರನ್ನು ಕೊಲೆ ಮಾಡುವ ಉದ್ದೆÃಶದಿಂದ ಜ,೧೧ ೨೦೧೬ ರಂದು ಮುಂಜಾನೆ  ೮.೧೫ಕ್ಕೆ ತಮ್ಮ ಮನೆಯ ಕೋಣೆಯಲ್ಲಿ ಮಲಗಿದ್ದಾಗ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಅಥಣಿ ಪೋಲಿಸ್ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಕುಲಕರ್ಣಿಯವರು ತನಿಖೆ ಪೂರೈಸಿ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಪ್ರಕರಣದ ಸಾಕ್ಷಿ ವಿಚಾರಣೆಯನ್ನು ಕೈಕೊಂಡ ೭ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಹಾಂತಪ್ಪ ಎ.ಡಿ. ಇವರು  ಆರೋಪಿತನಿಗೆ  ಭಾ.ದಂ.ಸಂ ಕಲಂ ೩೦೭ ರಲ್ಲಿನ ಅಪಾದನೆಗೆ ೫ವರ್ಷ ಸಾದಾ ಶಿಕ್ಷೆ ಮತ್ತು ೨೦ ಸಾವಿರ ರೂಗಳ ದಂಡ ಮತ್ತು ಭಾ.ದಂ.ಸಂ ಕಲಂ ೪೫೨ರಲ್ಲಿ ಅಪಾದನೆಗೆ ೩ ವರ್ಷ ಸಾದಾ ಶಿಕ್ಷೆ ಮತ್ತು ೨೦ ಸಾವಿರ ದಂಡ,ದಂಡದ ಹಣದಲ್ಲಿ ೩೦ ಸಾವಿರ ರೂಗಳನ್ನು ಗಾಯಾಳು ಮಹೇಂದ್ರ ಇತನಿಗೆ ಕೊಡುವಂತೆ ಆದೇಶಿಸಿ ೩೧-೧೨-೨೦೧೮ ರಂದು ತೀರ್ಪನ್ನು ನೀಡಿರುತ್ತಾರೆ ಮತ್ತು ಸರ್ಕಾರದ ಪರವಾಗಿ ಎಸ್.ಆರ್.ಪಾಟೀಲ ಸಾರ್ವಜನಿಕ ಅಭಿಯೋಜಕ ಚಿಕ್ಕೊÃಡಿ ರವರು ಪ್ರಕರಣವನ್ನು ನಡೆಸಿರುತ್ತಾರೆ.
….
loading...