ಗೋಟುರ ಗ್ರಾಮ ಪಂಚಾಯತಿ ಉಪ ಚುನಾವಣೆ ಭರ್ಜರಿ ಗೆಲುವು ಸಾಧಿಸಿದ ದುಂಡಪ್ಪ ಕಮತೆ

0
181


ಕನ್ನಡಮ್ಮ ಸುದ್ದಿ-ಹುಕ್ಕೇರಿ : ಜ.೨ ರಂದು ನಡೆದ ತಾಲೂಕಿನ ಗೋಟುರ ಗ್ರಾಮ ಪಂಚಾಯತಿ ವಾರ್ಡ್ ನಂ.೪ರ (ಸಾಮಾನ್ಯ)ಉಪ ಚುನಾವಣೆ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ .ಚುನಾವಣೆಯಲ್ಲಿ ಸಚಿವ ಸತೀಶ ಜಾರಕಿಹೋಳಿ ಬೆಂಬಲಿತ ದುಂಡಪ್ಪ ಕಮತೆ ಭರ್ಜರಿ ಗೆಲುವು ಸಾಧಿಸಿದ್ದಾರೆ .
ಗ್ರಾಮದ ವಾರ್ಡ್ ನಂ ೪ ರ ಈ ಹಿಂದಿನ ಸದಸ್ಯ ತಾತ್ಯಾಗೌಡ ಪಾಟೀಲ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಜ.೨ ರಂದು ಉಪ ಚುನಾವಣೆ ನಡೆದಿದ್ದು ,ದುಂಡಪ್ಪ ಕಮತೆ ಮತ್ತು ಅಶೋಕ ಗಂಗಣ್ಣವರ ನಡುವೆ ಜಿದ್ದಾಜಿದ್ದಿನ ಕಣ ಏರ್ಪಟಿತ್ತು .ಶುಕ್ರವಾರ ಫಲಿತಾಂಶ ತಿಳಿದು ಬಂದಿದ್ದು ದುಂಡಪ್ಪ ಕಮತೆ 290 ಮತ ಪಡೆದು 39 ಮತಗಳ ಅಂತರದಿಂದ ಪ್ರತಿ ಸ್ಪರ್ಧಿ ಅಶೋಕ ಗಂಗಣ್ಣವರ ಅವರನ್ನು ಫರಾಭಗೋಳಿಸಿದ್ದಾರೆ .ಅಶೋಕ ಗಂಗಣ್ಣವರ 251ಮತ ಪಡೆದು ಪರಾಜಿತಗೊಂಡಿದ್ದಾರೆ .
ವಿಜೇತ ಅಭ್ಯರ್ಥಿ ನೂತನ ಗ್ರಾಮ ಪಂಚಾಯತಿ ಸದಸ್ಯ ದುಂಡಪ್ಪಾ ಕಮತೆ ಮಾತನಾಡಿ ಗ್ರಾಮ ಪಂಚಾಯತಿಯ ಉಳಿದ ಅವಧಿಗೆ ಪ್ರಾಮಾಣಿಕವಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೆನೆ .ಸಚಿವ ಸತೀಶ ಜಾರಕಿಹೋಳಿ ಅವರ ಮಾರ್ಗದರ್ಶನದಲ್ಲಿ ಮತ್ತು ಗ್ರಾಮದ ಹಿರಿಯರ ಸಲಹೆಯಂತೆ ಅಭಿವೃದ್ಧಿಗೆ ಶ್ರಮೀಸುತ್ತನೆ .ವಾರ್ಡ್ ನಂ ೪ ಜನರು ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡಿದ್ದಾರೆ.ಅವರ ಸೇವೆಯನ್ನು ವಾರ್ಡ್ ಅಭಿವೃದ್ಧಿ ಪಡೆಸುವ ಮೂಲಕ ತಿರಿಸುತ್ತೆನೆ ಎಂದರು .

loading...