ವಿಷ ಕುಡಿಯುವೇವೂ, ಜಮೀನು‌ ನೀಡುವುದಿಲ್ಲ; ರೈತರ ಆಕ್ರೋಶ

0
334

ಕನ್ನಡಮ್ಮ ಸುದ್ದಿ-ಬೆಳಗಾವಿ : ನಗರದಲ್ಲಿ ಅಮೃತ ಯೋಜನೆಡಿಯಲ್ಲಿ ಹಲಗಾ ಗ್ರಾಮದಲ್ಲಿ ಸು. 18 ಎಕರೆ ಗುಂಟೆ ಜಾಗದಲ್ಲಿ ಒಳಚರಂಡಿ ಯೋಜನೆಯಡಿ ಮಲೀನ ಶುದ್ಧೀಕರಣ ಘಟಕ ಸ್ಥಾಪನೆಗೆ ಗುರುತಿಸಿರುವ ಜಮೀನು ನೀಡುವುದಿಲ್ಲವೆಂದು ಕಡಾಕಂಡಿತವಾಗಿ ರೈತರು ಕಳಕಳಿಯಿಂದ ಕೈ ಮುಗಿದು ಬೇಡಿಕೊಂಡರು. ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ
ಜಮೀನು ಮಾಲೀಕರ ಸಭೆಯಲ್ಲಿ ಮಾತನಾಡಿದರು.ಹಲಗಾ ಹಾಗು ಅಲಾರವಾಡ ಗ್ರಾಮದಲ್ಲಿ ಸುಮಾರು 21 ರೈತರ ಜಮೀನನ್ನು ಗುರುತಿಸಿದೆ. ಅದೇ ಜಮೀನು ಮೇಲೆ ಜೀವನ ನಡೆಸುತ್ತಿದ್ದಾರೆ.ಅತಂಹ ಫಲವತ್ತಾದ ಭೂಮಿಯನ್ನು ಕೈ ಬಿಟ್ಟು ಸರ್ಕಾರಿ ಜಾಗದಲ್ಲಿ ಎಸ್ ಟಿಪಿಯಲ್ಲಿ ನಿರ್ಮಿಸಲಾಗುತ್ತಿರುವ ಮಲೀನ ಶುದ್ಧೀಕರಣ ಘಟಕವನ್ನು ನಿರ್ಮಿಸಬೇಕು. ಒಂದು ವೇಳೆ ಇದರ ಮೇಲೆಯೂ ನಿರ್ಮಿಸಲು ಮುಂದಾದರೆ ವಿಷ ಕುಡಿದು ಪ್ರಾಣ ಬಿಟ್ಟೇವು ಆದರೆ ಜಮೀನು ಕೊಡುವುದಿಲ್ಲವೆಂದು ಎಚ್ಚರಿಕೆ ನೀಡಿದರು‌. ಈ‌ ಸಂದರ್ಭದಲ್ಲಿ ಪ್ರಕಾಶ ಹುಕ್ಕೇರಿ, ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಅಭಯ ಪಾಟೀಲ, ಲಕ್ಷ್ಮೀ ಹೆಬ್ಬಾಳಕರ, ಅನಿಲ ಬೆನಕೆ, ಪಾಲಿಕೆ ಮೇಯರ ಬಸಪ್ಪಾ ಚಿಕ್ಕಲದಿನ್ನಿ, ಉಪಮೇಯರ ಮಧುಶ್ರೀ ಪೂಜಾರಿ, ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ, ಸಿಇಓ ರಾಮಚಂದ್ರನ್,ಪಾಲಿಕೆ ಆಯುಕ್ತ ಶಶಿಧರ ಕುರೇರ, ಅಧಿಕಾರಿಗಳು ಹಾಜರಿದ್ದರು.

loading...