ಸಿಡ್ನಿ ಟೆಸ್ಟ್ : ಕುಸಿತ ಕಂಡ ಆಸೀಸ್, ಮಿಂಚಿದ ವಿರಾಟ್ ಪಡೆಯ ಬೌಲಿಂಗ್

0
11

ಸಿಡ್ನಿ:-ಇಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತನ್ನ ಮೊದಲ ಇನಿಂಗ್ಸ್ನಲ್ಲಿ ಕೇವಲ ೨೩೬ ರನ್ ಗಳಿಗೆ ೬ ವಿಕೆಟ್ ಕಳೆದುಕೊಂಡಿದೆ.ಸ್ಪಿನ್ನರ್ ಕುಲದೀಪ್ ಯಾದವ್ ಕೈಚಳಕ್ಕೆ ಆಸೀಸ್ ಬ್ಯಾಟಿಂಗ್ ಬಲ ಕುಸಿದಿದೆ.
ಪ್ರಮುಖವಾಗಿ ೩೮ ರನ್ ಗಳಿಸಿದ್ದ ಮಾರ್ನಸ್ ವಿಕೆಟ್ ಪತನವಾಗುತ್ತಿದ್ದಂತೆಯೇ ಇತ್ತ ಆಸ್ಟ್ರೇಲಿಯಾದ ಆಟಾಗರರ ಪೆವಿಲಿಯನ್ ಪರೇಡ್ ಆರಂಭವಾಯಿತು ಎನ್ನಬಹುದು. ಲ್ಯಾಬಸ್ಚ್ಯಾಗ್ನೆ ಔಟಾದ ಬಳಿಕ ರನ್ ಗಳಿಸಿದ್ದ ಶಾನ್ ಮಾರ್ಶ್ ಕೂಡ ಔಟಾದರು. ಬಳಿಕ ಟ್ರಾವಿಸ್ ಹೆಡ್ ೨೦ ರನ್ ಗಳಿಸಿ ಔಟಾದರು. ಬಳಿಕ ಕ್ರೀಸ್ ಗೆ ಆಗಮಿಸಿದ ನಾಯಕ ಟಿಮ್ ಪೈನ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ೫ ರನ್ ಗಳಿಸಿ ಕ್ರೀಸ್ ಗೆ ಅಂಟಿಕೊಳ್ಳುತ್ತಿದ್ದ ಪೈನ್ ರನ್ನು ಕುಲದೀಪ್ ಯಾದವ್ ಔಟ್ ಮಾಡಿದರು.
ಇನ್ನು ಭಾರತದ ಪರ ಕುಲದೀಪ್ ಯಾದವ್ ೩ ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರೆ, ರವೀಂದ್ರ ಜಡೇಜಾ ೨ ಮತ್ತು ಮಹಮದ್ ಶಮಿ ೧ ವಿಕೆಟ್ ಪಡೆದರು.
ಪೈನ್ ಔಟಾದ ಬಳಿಕ ಬೆಳಕಿನ ಸಮಸ್ಯೆ ಮತ್ತು ಮಳೆಯಿಂದಾಗಿ ಮೂರನೇ ದಿನದಾಟವನ್ನು ಮುಕ್ತಾಯಗೊಲಿಸಲಾಗಿದ್ದು, ಆಸ್ಟ್ರೇಲಿಯಾ ತಂಡ ೬ ವಿಕೆಟ್ ನಷ್ಟಕ್ಕೆ ೨೩೬ರನ್ ಗಳಿಸಿದೆ. ಅಂತೆಯೇ ಆಸಿಸ್ ಪಡೆ ಇನ್ನೂ ೩೮೬ ರನ್ ಗಳ ಹಿನ್ನಡೆ ಅನುಭವಿಸಿದ್ದು, ೨೮ ರನ್ ಗಳಿಸಿರುವ ಹ್ಯಾಂಡ್ಸ್ ಕಾಂಬ್ ಮತ್ತು ೨೫ ರನ್ ಗಳಿಸಿರುವ ಪ್ಯಾಟ್ ಕಮಿನ್ಸ್ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

loading...