ಪಂ. ಗವಾಯಿಗಳಿಗೆ “ಭಾರತರತ್ನ” ನೀಡಲು ಒತ್ತಾಯ

0
18

ವಿಜಯಪುರ : ದೇಶದ ಲಕ್ಷಾಂತರ ಸಂಗೀತ ಕಲಾವಿದರ ಬಾಳಿನ ಬೆಳಕಾಗಿರುವ ಪಂ.ಪುಟ್ಟರಾಜ ಗವಾಯಿಗಳಿಗೆ ಭಾರತರತ್ನ ಪ್ರಧಾನಮಾಡಬೇಕೆಂದು ಕರ್ನಾಟಕ ನಾಟಕ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಎಲ್.ಬಿ.ಶೇಖ ಮಾಸ್ತರ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದ ಆವರಣದ ವೇದಿಕೆಯಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಸಂಘ ಹಾಗೂ ಕರ್ನಾಟಕ ವೃತ್ತಿ ರಂಗಭೂಮಿ ಕಲಾವಿದರ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಗಾನಯೋಗಿ, ಪದ್ಮಭೂಷಣ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ೮ನೇ ಪುಣ್ಯಸ್ಮರಣೋತ್ಸವದ ಸಮಾರಂಭದಲ್ಲಿ ಪಾಲ್ಗೊಂಡು ಆಶಯ ನುಡಿಗಳನ್ನಾಡಿದ ಅವರು, ಸಂಗೀತ ಕ್ಷೆÃತ್ರದಲ್ಲಿ ಅನನ್ಯ ಸಾಧನೆಗೈದಿರುವ ಪಂ.ಪುಟ್ಟರಾಜ ಕವಿ ಗವಾಯಿಗಳು ಸಂಗೀತ, ಸಾಮಾಜಿಕ ಲೋಕಕ್ಕೆ ನೀಡಿದ ಕೊಡುಗೆ ಅನನ್ಯ. ತ್ರಿಭಾಷಾ ಕವಿ ವಿದ್ವಾಂಸರಾಗಿದ್ದ ಪಂ.ಪುಟ್ಟರಾಜ ಕವಿ ಗವಾಯಿಗಳ ಸೇವಾ ಕಳಕಳಿಯ ಫಲವಾಗಿ ಸಾವಿರಾರು ಸಂಗೀತ ಕಲಾವಿದರು ಬೆಳಕಿಗೆ ಬರುವಂತಾಯಿತು ಎಂದರು.

ಕೊಳಲುವಾದಕಿ ಕು. ಕೃತಿಕಾ ಜಂಗಿಮಠ, ಬಸವರಾಜ ಬಂಟನೂರು, ಅಶೋಕ ಇನಾಮದಾರ, ಶಶಿಕಲಾ ಕುಲ್ಲೊÃಳ್ಳಿ, ಅಮರೇಶ ಶಳ್ಳಗಿ, ಶಿವಣ್ಣ ಅಮರಗೋಳ, ಶಿವಣ್ಣ ಹೂಗಾರ, ಬಸವರಾಜ ಹೂಗಾರ (ತಬಲಾ), ಬಸವಂತರಾಯ ಹೂಗಾರ (ತಬಲಾ) ಪ್ರಭು ಗುಡ್ಡದ, ಸದಾಶಿವ ಬಿರಾದಾರ ಇತರರು ಸಂಗೀತ ಸೇವೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಖಾಜಿಸಾಬ ಜಂಗಿ, ಬಸವರಾಜ ಭದ್ರಿ, ಡಾ.ದೇವಿಕಾ ನಗರಕರ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಕಲಾವಿದ ಶ್ರಿÃಧರ ಹೆಗಡೆ ಸ್ವಾಗತಿಸಿದರು. ರಂಗ ನಿರ್ದೇಶಕ ರವೀಂದ್ರ ಮೇಡೆಗಾರ ವಂದಿಸಿದರು. ಸಾಹಿತಿ ರಂಗ ಕರ್ಮಿ ಸಂಗಮೇಶ ಬದಾಮಿ ನಿರೂಪಿಸಿದರು.

loading...