ಭಾರತ ಬಂದ್ ಬೆಂಬಲಿಸಿ ಮುಷ್ಕರ

0
6

ವಿಜಯಪುರ: ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ವಿಫಲ, ಕಾರ್ಮಿಕ ಹಾಗೂ ಜನಸಾಮಾನ್ಯರ ಹಿತ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಭಾರತ ಬಂದ್‌ಗೆ ಬೆಂಬಲಿಸಿ ವಿಜಯಪುರದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.
ಎಐಟಿಯುಸಿ ಸಿಐಟಿಯು, ಎಐಯುಟಿಯುಸಿ, ಬ್ಯಾಂಕ ನೌಕರರ ಸಂಘ, ಸರಕಾರಿ ನೌಕರರ ಒಕ್ಕೂಟ, ಕೆಎಸ್‌ಆರ್‌ಟಿಸಿ ಸ್ಟಾಫ್ ಆಂಡ್ ವಕರ‍್ಸ ಯುನಿಯನ್, ಅಖಂಡ ಕರ್ನಾಟಕ ರಾಜ್ಯ ರೈತ ಸಂಘ, ಮರ್ಚಂಟ್ ಅಸೋಸಿಯೆಶನ್, ಎಬಿಐಇಜಿ, ಸೌಥ್ ಇಂಡಿಯನ ಫೆಡರೇಶನ್ ಆಪ್ ಟ್ರೆÃಡ ಯುನಿಯನ, ಹಮಾಲರ ಸಂಘ, ಆಶಾ, ಅಂಗನವಾಡಿ, ಬಿಸಿಯೂಟ, ವಸತಿನಿಲಯ ಕಾಮಿಕರು, ಗಾರ್ಡನ ವಕರ‍್ಸ, ಬಹುಹಳ್ಳಿ ಕುಡಿಯುವ ನೀರು ಸರಬರಾಜು ಸಂಘ, ಅಂಚೆ ನೌಕರರ ಸಂಘ,ಜನವಾದಿ ಮಹಿಳಾ ಸಂಘಟನೆ, ಔಷದ ಪ್ರತಿನಿಧಿಗಳ ಸಂಘ ಪೌರ ಕಾಮಿಕರ ಸಂಘ, ದಲಿತಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.

 

ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಭಿ.ಭಗವಾನರೆಡ್ಡಿ ಮಾತನಾಡಿ, ಬಿಜೆಪಿ ನೆತೃತ್ವದ ಕೇಂದ್ರ ಸರಕಾರ ಕೇವಲ ಬಂಡವಾಳಶಾಹಿಗರ ಪರವಾದ ನೀತಿಯನ್ನು ಜಾರಿಮಾಡುವ ಮುಖಾಂತರ ಸರಕಾರಿ ಸ್ವಾಮ್ಯದ ಕಂಪನಿಗಳು, ರೇಲ್ವೆ, ಸಾರಿಗೆ, ಖಾಸಗೀಕರಣ ಮಾಡಲು ಹೊರಟಿದೆ ಎಂದು ದೂರಿದರು.
ಕೆಎಸ್‌ಆರ್‌ಟಿಸಿ ಸ್ಟಾಫ್ ವಕರ‍್ಸ್ ಅಸೋಸಿಯೇಷನ್‌ನ ಐ.ಐ. ಮುಶ್ರಿÃಫ್, ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಲಕ್ಷö್ಮಣ ಹಂದ್ರಾಳ, ಸುನೀಲ ಸಿದ್ರಾಮಶೆಟ್ಟಿ, ಚಂದ್ರಶೇಖರ ಲೆಂಡಿ, ಜಿ.ಜಿ.ಗಾಂದಿ, ಎಸ್.ಎಲ್. ಕುಲಕರ್ಣಿ, ಅರವಿಂದ ಕುಲಕರ್ಣಿ, ಶ್ರಿÃನಾಥ ಪೂಜಾರಿ, ಪ್ರಕಾಶ ಹಿಟ್ನಳ್ಳಿ ಪಾಲ್ಗೊಂಡಿದ್ದರು.

loading...