ಅಲೆಮಾರಿ ಜನರಿಗೆ ಉಚಿತ ದಿನನಿತ್ಯ ಬಳಕೆಯ ವಸ್ತು ವಿತರಣೆ

0
38

ಕನ್ನಡಮ್ಮ ಸುದ್ದಿ-ಅಂಕೋಲಾ: ಇಲ್ಲಿಯ ಆರ್‌.ಎಸ್‌.ಎಸ್‌ ವತಿಯಿಂದ ಅಲೆಮಾರಿ ಜನರಿಗೆ ಉಚಿತ ಬೆಡ್‌ ಶೀಟ್‌ ಹಾಗೂ ದಿನನಿತ್ಯ ಬಳಕೆಯ ವಸ್ತು ವಿತರಣಾ ಕಾರ್ಯ ನಡೆಯಿತು.
ಊರಿಂದೂರಿಗೆ ಅಲೆಯುವ ಅಲೆಮಾರಿ ಜನರು ಅಂಕೋಲಾ ಉತ್ಸವದ ನಿಮಿತ್ತ ಬಂದಿದ್ದು ಎಲ್ಲೆಂದರಲ್ಲ ಮಲಗುವುದು, ಗ್ರಹಬಳಕೆಯ ವಸ್ತುಗಳಿಲ್ಲದೆ ಏನು ಸಿಗುತ್ತದೊ ಅದರಲ್ಲಿ ಅಡುಗೆ ಮಾಡಿ ಬರಿ ನೆಲದಲ್ಲೆ ಮಲಗುತ್ತಾ ಎಲ್ಲೆಂದರೆ ಅಲೆಯುವುದನ್ನು ಆಳಿಸಿದ ಇಲ್ಲಿಯ ಆರ್‌.ಎಸ್‌.ಎಸ್‌ ಕಾರ್ಯಕರ್ತರು, ಅರುಣ್‌ ಬಾಳಿಗಾ ನೇತೃತ್ವದಲ್ಲಿ ಅಲೆಮಾರಿ ಕುಟುಂಬಕ್ಕ ಉಚಿತವಾಗಿ ಬೆಡ್‌ ಶೀಟ್‌, ಬಕೇಟ್‌, ಚಾಪೆ ಸೇರಿದಂತೆ ದಿನ ಬಳೆಕೆಯ ವಸ್ತುಗಳನ್ನು ವಿತರಿಸಿದರು. ಮೈ ಜುಮ್ಮ ಎನ್ನುವ ಚಳಿಯಲ್ಲೆ ನೆಲದಲ್ಲಿ ಮಲಗುತ್ತಿದ್ದ ಈ ಜನರಿಗೆ ಬೆಡ್‌ ಶೀಟ್‌ ಹಾಗೂ ದಿನ ಬಳೆಕೆಯ ವಸ್ತುಗಳನ್ನು ನೀಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು. ನಿನ್ನೆ ಅಂಕೋಲಾ ಉತ್ಸವ ಕೊನೆಗೊಂಡಿದ್ದು ಇಂದು ಊರು ಊರು ಅಲೆಯುವ ಅಲೆಮಾರಿ ಜನರು ಇಂದು ಗೋವಾದತ್ತ ಪ್ರಯಾಣ ಬೆಳೆಸಿದ್ದಾರೆ ಅಲ್ಲಿ ಗೋವಾ ಫೆಸ್ತ ನಡೆಯುತಿದೆ ಅಲ್ಲಿಗೆ ತೆರಳುವುದಾಗಿ ತಿಳಿಸಿದ್ದು ಹೀಗಾಗಿ ಚಳಿಯಿಂದ ರಕ್ಷಣೆ ಪಡೆಯಲೆಂದು ಅವರಿಗೆ ಬೆಡ್‌ ಶೀಟ್‌ ನೀಡಲಾಗಿದೆ ಎಂದು ಅರುಣ ಶೇಣ್ವಿ ಹೇಳಿದರು.
ವಿತರಣೆಯಲ್ಲಿ ರಾಮನಾಥ ಬಾಳಿಗಾ, ರಾಮಚಂದ್ರ ನಾಯ್ಕ, ಎಮ್‌.ಎಮ್‌ ಕರ್ಕಿಕರ, ಟೆಂಪೋ ಚಾಲ ಮಾಲಕರ ಸಂಘದ ಅಧ್ಯಕ್ಷ ಬಾಳಾ ನಾಯ್ಕ, ಪಿಎಸೈ ಶ್ರೀಧರ, ಸಂಜಯ ಪ್ರಭು, ಸಂಜೀವ ಮಹಾಲೆ, ಪ್ರಸಾದ ಮಹಾಲೆ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಒಟ್ಟಿನಲ್ಲಿ ಊರು ಊರು ಅಲೆಯುವ ಇವರು ಇರಲು ಮನೆ ಇಲ್ಲದೆ ಎಲ್ಲೆಂದರೆ ಮಲಗುವ ಇವರು ಕೆಲವರು ಭಿಕ್ಷೆ ಬೇಡಿ ಇನ್ನು ಕೆಲವರು ಬಲೂನ್‌ ಹಾಗೂ ಇನ್ನಿತರೆ ಸಣ್ಣ ಪುಟ್ಟ ವಸ್ತುಗಳನ್ನು ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದು, ಇದನ್ನು ಬಿಟ್ಟು ಕಳ್ಳತನ ಹಾಗೂ ಇನ್ನಿತರೆ ಕಾನೂನು ಬಾಹೀರ ಕೆಲಸಕ್ಕೆ ಇಳಿಯದೆ ಇರಲಿ ಎನ್ನುವುದು ಆರ್‌.ಎಸ್‌.ಎಸ್‌ ಹಾಗೂ ನಮ್ಮ ನಿಮ್ಮೆಲ್ಲರ ಆಶಯವಾಗಿದೆ.

loading...