ಮಹಿಳೆಯ ಜಮೀನಿನಲ್ಲಿ ಅತಿಕ್ರಮಣ ಕಟ್ಟಡ ನಿರ್ಮಾಣ

0
19

ತಾಲೂಕಿನ ಲಕ್ಷಿö್ಮÃ ಟೇಕಡಿಯ ರೇಖಾ ರವಿ ಶಿರಗಾವಂವಕರ ಉರ್ಫ ಕಾಂಬಳೆ ಇವರ ಜಮಿನಿನಲ್ಲಿ ಕಾನೂನು ಬಾಹಿರವಾಗಿ ಸಂತೋಷ ಶಿರಗಾವಂಕ ಎಂಬುವರು ಅತಿಕ್ರಮಣ ಮಾಡಿ ಮನೆಕಟ್ಟುತ್ತಿದ್ದಾರೆ.ನನಗೆ ನ್ಯಾಯ ಕೊಡಿಸಬೇಕೆಂದು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಬುಧವಾರ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿದ ಅವರು ಲಕ್ಷಿö್ಮÃ ಟೇಕಡ್ ಪ್ರದೇಶದಲ್ಲಿ ಬರುವ ರಿ.ಸ.ನಂ- ೧೮/೨ಪಿ-೨ ರ ಸರ್ವೇ ನಂ. ೫ ಎಕರೆ ೩೦ ಗುಂಟೆ ಜಮಿನಿದ್ದು,ಈ ಜಮೀನಿನಲ್ಲಿ ಸಂತೋಷ ಕುಮಾರವ ಶಿರಗಾಂವಕಾರ್ ಎಂಬುವರು ಕಾನೂನು ಬಾಹಿರವಾಗಿ ಮನೆ ಕಟ್ಟಲು ಮುಂದಾಗಿದ್ದಾರೆ .ಕೇಳಲು ಹೋದರೆ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ.ಆದ್ದರಿಂದ ಜಿಲ್ಲಾಧಿಕಾರಿಗಳು ಯಾವ ಹಕ್ಕು ಬದಲಾವಣೆ ಮಾಡಬಾರದು.ವತ್ತು ನನಗೆ ನ್ಯಾಯ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮೂಲಕ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ರೇಖಾ ರವಿ ಶಿರಗಾವಂವಕರ ,ಕರ್ನಾಟಕ ದಲಿತ ಸಂಘರ್ಷ ಸಮಿತಿ ಕರ‍್ಯಕರ್ತರು ಸೇರಿದಂತೆ ಇತರರು ಇದ್ದರು.

Kannadamma News Network is news and media company based out of Belagavi, Karnataka and covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food.

Please follow us on: facebook: http://facebook.com/kannadamma twitter: twitter.com/kannadamma website: https://www.kannadamma.net e-mail: [email protected]

loading...