ವಿಶ್ವಕರ್ಮ ವಿಕಾಸ ವೇದಿಕೆಯ ಹೆಸರಿನಲ್ಲಿ ಜನರಿಗೆ ವಂಚನೆ || 24-01-2019

0
41

ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಕಾಳಿಕಾ ದೇವಿ ಮಂದಿರದಲ್ಲಿ ಕೆಲ ಟ್ರಸ್ಟಿಗಳು ಕಾನೂನು ಬಾಹಿರವಾಗಿ ವಿಶ್ವಕರ್ಮ ವಿಕಾಸ ವೇದಿಕೆಯ ಹೆಸರಿನಲ್ಲಿ ಜನರಿಗೆ ವಂಚಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಹರೀಶ ಇಂಗಳಗುಂದಿ ಆರೋಪಿಸಿದರು.
ಗುರುವಾರ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಿರಸಂಗಿ ಗ್ರಾಮದ ಕಾಳಿಕಾದೇವಿ ಟ್ರಸ್ಟ್ ಹಾಗೂ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಗಳು ಕಾಳಿಕಾ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ೧೯೬೦ರ ಕಾಯ್ದೆಯಡಿ ೧೯೯೭-೭೮ನೇ ಸಾಲಿನಲ್ಲಿ ನೊಂದಣಿಯಾಗಿದೆ. ನಂತರ ೨೦೦೧-೦೨ರ ಸಾಲಿನವರೆಗೂ ಆಡಿಟ್ ಹಾಗೂ ರಿನಿವಲ್ ಆಗಿರುತ್ತದೆ. ಆದನಂತರ ರಿನವಲ್ ಆಗದೆ ಇದ್ದರೂ ಈ ಸಂಸ್ಥೆಯವರು ಕಾನೂನು ಬಾಹಿರವಾಗಿ ಕಾಳಿಕಾದೇವಿ ಹೆಸರಿನಲ್ಲಿ ತಾಜ್ಯದ ಹಲವೆಡೆಯಿಂದ ಬರುವ ಭಕ್ತಾದಿಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದರು.

Kannadamma News Network is news and media company based out of Belagavi, Karnataka and covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food.

Please follow us on:
facebook: http://facebook.com/kannadamma
twitter: twitter.com/kannadamma
website: https://www.kannadamma.net
e-mail: [email protected]

loading...