ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಸರಕಾರ ಮುಂದಾಗಲಿ

0
28

ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಸರಕಾರ ಮುಂದಾಗಲಿ ಬಜೆಟ್‌ದಲ್ಲಿ ಸಮಾಜಕ್ಕೆ ಹಣ ನೀಡುವಂತೆ ಒತ್ತಾಯ ಕನ್ನಡಮ್ಮ ಸುದ್ದಿ-ಬೆಳಗಾವಿ : ಎಸ್ಸಿ-ಎಸ್ಟಿ ಅಲೆಮಾರಿ ,ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಬರುವ ೨೦೧೯-೨೦ ನೇ ಸಾಲಿನ ಬಜೆಟ್‌ನಲ್ಲಿ ೨ ಸಾವಿರ ಕೋಟಿ ಅನುದಾನವನ್ನು ರಾಜ್ಯ ಸರಕಾರ ಮೀಸಲಿರಿಸುವಂತೆ ಜಿಲ್ಲಾ ಅಲೆಮಾರಿ,ಅರೆ ಅಲೆಮಾರಿ ಸಂಘದ ಜಿಲಾಧ್ಯಕ್ಷ ಹೂವಪ್ಪ ಭಜಂತ್ರಿ ಸರಕಾರಕ್ಕೆ ಒತ್ತಾಯಿಸಿದರು. ಗುರುವಾರ ನಗರದಲ್ಲಿ ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಸುಮಾರ ೨.ಲಕ್ಷ ೫೦ ಸಾವಿರೂ ಜನ ಸಂಖ್ಯೆ ಹೊಂದಿರುವ ನಮ್ಮಗೆ ಸರಕಾರದ ಮೂಲಭೂತ ಸೌಕರ್ಯಗಳು ವಂಚಿತರಾಗಿದ್ದಾರೆ.ಆದ್ದರಿಂದ ನಮ್ಮ ಜನಾಂಗಕ್ಕೆ ಶಿಕ್ಷಣ,ವಸತಿ,ಆರೋಗ್ಯ ಮತ್ತು ಕೌಶಲ್ಯ ಅಭಿವೃದ್ಧಿ ಹಾಗೂ ನಿರೋದ್ಯೂಗ ನಿವಾರಣೆಯಂತಹ ಅಭಿವೃದ್ಧಿ ಯೋಜನೆಗಳಿಗಾಗಿ ಬರುವ ಬಜೆಟ್‌ದಲ್ಲಿ ೨ ಸಾವಿರ ಕೋಟಿ ರೂ ಅನುದಾನ ನೀಡಬೇಕೆಂದರು.

loading...