ತಂದೆ ತಾಯಿ ನೆನೆಯುವುದು ಪ್ರತಿಯೊಬ್ಬರ ಕರ್ತವ್ಯ

0
29

ವಿಜಯಪುರ: ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎಂಬಂತೆ ತಂದೆ ತಾಯಿಗಳೇ ಜಗತ್ತಿಗೆ ಬೆಳಕನ್ನು ಕೊಡುವ ಕಣ್ಮಿಗಳು. ಫಲಕೊಟ್ಟ ಮರವನ್ನು ಸ್ಮರಿಸಲೇಬೇಕು ಎಂದು ಅಂಜುಮನ್ ಕಾನೂನು ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಎಂ.ಆಯ್.ಹೊರಪೇಟ ಹೇಳಿದರು.
ಇಲ್ಲಿನ ಎಕ್ಸಲಂಟ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ೧೨೩ನೇ ಸುಭಾಸಚಂದ್ರ ಭೋಸ್ ಹಾಗೂ ದೈಹಿಕ ಶಿಕ್ಷಣ ದಿನಾಚರಣೆ ಕಾರ್ಯಕ್ರಮದ ಅತಿಥಿ ಸ್ಥಾನವನ್ನು ವಹಿಸಿ ಅವರು ಮಾತನಾಡಿ ವೀರಯೋಧ ಸುಭಾಸಚಂದ್ರ ಭೋಸ್ ಹಾಗೂ ಅಂತಹ ಮಹಾನ್ ಪುರಷನನ್ನು ನೀಡಿದ ಅವರ ತಾಯಿ ಪದ್ಮಾವತಿದೇವಿಯನ್ನು ಇಂದು ನಾವೆಲ್ಲ ನೆನಪಿಸಿಕೊಳ್ಳಲೇಬೇಕು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜಶೇಖರ ಕೌಲಗಿ ಅವರು, ಯುವ ಜನತೆಯ ಕಣ್ಮನಿಗಳಾದ ಸ್ವಾಮಿ ವಿವೇಕಾನಂದರು ಹಾಗೂ ಸುಭಾಸಚಂದ್ರ ಭೋಸ್ ಅವರ ಆದರ್ಶಗಳನ್ನು ಅಳವಡಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ಸುಮಾ ಮಿರಗಿ ಹಾಗೂ ಪಿ.ಬಿ.ಕೊಳಮೆಲಿ ಸುಭಾಷಚಂದ್ರ ಭೋಸ ಅವರ ಕುರಿತು ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಮುಖ್ಯಗುರು ಎಂ.ಆಯ್.ಬಿರಾದಾರ, ಎಂ.ಎಚ್.ಹುಗ್ಗೆÃನವರ, ಆರ್.ಕೆ.ದೇಶಪಾಂಡೆ, ರೇಖಾ ಮಾಳಿ ಉಪಸ್ಥಿತರಿದ್ದರು. ಎಸ್.ಆಯ್.ಬಿರಾದಾರ ಸ್ವಾಗತಿಸಿದರು. ಎ.ಬಿ.ಗೊಬ್ಬೂರ ವಂದಿಸಿದರು. ಜಯಶ್ರಿÃ ಆರ್. ಗುಡ್ಡದ ನಿರೂಪಿಸಿದರು.

loading...