ರಸ್ತೆ ಡಾಂಬರೀಕರಣಕ್ಕೆ ಭೂಮಿ ಪೂಜೆ

0
3

ಕನ್ನಡಮ್ಮ ಸುದ್ದಿ-ಲಕ್ಷ್ಮೇಶ್ವರ: ತಾಲೂಕಿನ ಸುಮಾರು ರಸ್ತೆಗಳು ಹದಗೆಟ್ಟಿದ್ದು ಅವುಗಳನ್ನು ಹಂತ-ಹಂತವಾಗಿ ಸುಧಾರಣೆ ಮಾಡಲಾಗುವುದು ಎಂದು ಶಿರಹಟ್ಟಿ ಮತ ಕ್ಷೇತ್ರದ ಜನಪ್ರೀಯ ಶಾಸಕ ರಾಮಣ್ಣ ಲಮಾಣಿ ಹೇಳಿದರು. ಅವರು ತಾಲೂಕಿನ ಕುಂದ್ರಳ್ಳಿ ಗ್ರಾಮದಲ್ಲಿ ಕುಂದ್ರಳ್ಳಿಯಿಂದ ಕುಂದ್ರಳ್ಳಿ ತಾಂಡಾದವರೆಗೆ ರಸ್ತೆಗೆ ಮರು ಡಾಂಬರೀಕರಣಕ್ಕೆ ಭೂಮಿ ಪೂಜೆ ನೇರವೆರಿಸಿ ಮಾತನಾಡಿ. ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ಈ ರಸ್ತೆಗಳನ್ನು ಹಂತ-ಹಂತವಾಗಿ ಸುಧಾರಣೆ ಮಾಡುತ್ತೇನೆ. ಹಾಗೂ ಗುತ್ತಿಗೆದಾರರು ರಸ್ತೆಗಳನ್ನು ಅವರಿಗೆ ಕೊಟ್ಟ ಅವಧಿಯಲ್ಲಿಯೇ ಮುಗಿಸಿ ಗುಣಮಟ್ಟದ ರಸ್ತೆಯನ್ನು ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರಸಪ್ಪ ಇಮ್ಮಡಿ, ಪುಂಡಲೀಕ ಲಮಾಣಿ, ಶಿವು ಲಮಾಣಿ, ಎಂ.ಡಿ.ಪಾಟೀಲ್, ಕಲ್ಲಪ್ಪ ಹಡಪದ, ಹಾಲಪ್ಪ ಹಂಗನಕಟ್ಟಿ, ಮಂಜಪ್ಪ ಕಳಸದ, ಭರಮಪ್ಪ ಪೂಜಾರ, ಶಿವಾನಂದ ದೇಸಾಯಿ, ಚನ್ನಪ್ಪ ಸೊರಟೂರ, ಕರಿಯಪ್ಪ ಮುಂದಿನಮನಿ, ಸುಭಾಷಗೌಡ ಪಾಟೀಲ್, ಶಿವಜೋಗಪ್ಪ ಹಮ್ಮಗಿ ಇದ್ದರು.

loading...