ಸಂಘಟನೆಯಿಂದ ಸಮಾಜ ಮುಂದುವರೆಯಲು ಸಾಧ್ಯ: ನಾಯಕ

0
20

ಕನ್ನಡಮ್ಮ ಸುದ್ದಿ-ಅಂಕೋಲಾ: ಇತ್ತೀಚಿನ ದಿನಗಳಲ್ಲಿ ಆಗೇರ ಸಮಾಜದ ಬಾಂಧವರಲ್ಲಿ ಸಂಘಟನಾ ಮನೋಭಾವನೆ ಕಂಡುಬರುತ್ತಿದ್ದು ಸಂತಸದ ವಿಷಯವಾಗಿದೆ. ಸಂಘಟನೆಯಿಂದ ಮಾತ್ರವೇ ಸಮಾಜ ಮುಂದುವರೆಯಲು ಸಾಧ್ಯ ಎಂದು ಕೆಪಿಸಿಸಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದರು.
ಅವರು ಶಟಗೇರಿಯ ಶ್ರೀ ವಿಠೋಬ ದೇವ ಕ್ರೀಡಾ ಸಮಿತಿಯಿಂದ ಹಮ್ಮಿಕೊಂಡ ಆಗೇರ ಸಮಾಜದ ಪ್ರಥಮ ವರ್ಷದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಯಾಂತ್ರಿಕ ಬದುಕಿನಲ್ಲಿ ನಮ್ಮ ಆರೋಗ್ಯವನ್ನು ಕೂಡ ಕಡೆಗಣಿಸುವಂತಾಗಿದೆ. ಇಂತಹ ಯಾಂತ್ರಿಕ ಒತ್ತಡಮಯ ಬದುಕಿನಿಂದ ಹೊರಬಂದು ಕ್ರೀಡೆ ಹಾಗೂ ಇಂತಹ ಮನೋರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಶಿಕ್ಷಣ ಜ್ಞಾನವನ್ನು ವೃದ್ಧಿಸಿದರೆ ಕ್ರೀಡೆಗಳು ಮನಸಿಕ ದೈಹಿಕ ಸದೃಡತಯೊಂದಿಗೆ ಮನಸು ಉಲ್ಲಾಸದಿಂದಿರಲು ಸಹಕಾರಿ. ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಹೆಚ್ಚು ಲವಲವಿಕೆ ಹಾಗೂ ಚಟುವಟಿಕೆಯಿಂದಿರಲು ಸಾಧ್ಯ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ವಲಯ ಅರಣ್ಯಾಧಿಕಾರಿ ರಮೇಶ ಸೋಮು ಹುಲಸ್ವಾರ ಮಾತನಾಡಿ, ಆಗೇರ ಸಮುದಾಯದವರು ಸಂಘಟಿತರಾಗಿ ತಮ್ಮ ಸಮಾಜದ ಏಳ್ಗೆಗಾಗಿ ಶ್ರಮಿಸಬೇಕು. ಹೆಚ್ಚೆಚ್ಚು ಸುಶಿಕ್ಷಿತರಾಗಿ ಶೈಕ್ಷಣಿಕವಾಗಿ ಮುನ್ನಡೆಯಬೇಕು. ಈ ಭಾಗದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಟಗೇರಿ ಗ್ರಾಮ ಪಂಚಾಯತ ಅಧ್ಯಕ್ಷ ಶಶಿಧರ ನೀಲಕಂಠ ನಾಯಕ ಮಾತನಾಡಿ, ಇಂತಹ ಕ್ರೀಡಾಕೂಟಗಳಿಂದ ಸಮಾಜದ ಬೇರೆ ಬೇರೆ ಊರಿನ ಕ್ರೀಡಾ ಪಟುಗಳ ಜೊತೆ ಒಂದೆಡೆ ಸೇರಿ ಅವರೊಡನೆ ಆಡವ ಭಾಗ್ಯ ಈ ಪಂದ್ಯಾವಳಿ ಮಾಡಿಕೊಟ್ಟಿದೆ. ಹಾಗೂ ಯುವಕರಿಗೆ ಉತ್ತೇಜನ ನೀಡುವಲ್ಲಿ ಇದು ಸಹಕಾರಿಯಾಗಿದೆ. ತಮ್ಮಲ್ಲಿರುವ ಪ್ರತಿಭೆಗಳನ್ನು ಇಂತಹದರ ಮೂಲಕ ಹೊರ ಹಾಕುವುದಲ್ಲಿ ಈ ಕ್ರೀಡಾಕೂಟ ಸಹಕಾರಿಯಾಗುತ್ತೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾಪಟು ಮಾನಸಾ ಮನೋಹರ ನಾಯಕರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಶಟಗೇರೆ ಗ್ರಾಮ ಪಂಚಾಯತ ಸದಸ್ಯರಾದ ಶೈಲಾ ಶಾಂತಾ ಆಗೇರ, ಸಂಜೀವ ಬೀರಣ್ಣ ನಾಯಕ ಉಪಸ್ಥಿತರಿದ್ದರು. ಸಮಾಜಿಕ ಕಾರ್ಯಕರ್ತ ಸುಭಾಷ ಕಾರೇಬೈಲ್‌ ನಿರೂಪಿಸಿದರು.

loading...