ರಮೇಶ ಜಾರಕಿಹೋಳಿಗೆ ಪಕ್ಷ ನೋಟಿಸ್ ನೀಡಿದೆ : ಉತ್ತರ ಬಾರದಿದ್ದರೆ ಕ್ರಮ ಕೈಗೋಳುತ್ತಾರೆ

0
12

ರಮೇಶ ಜಾರಕಿಹೋಳಿಗೆ ಪಕ್ಷ ನೋಟಿಸ್ ನೀಡಿದೆ : ಉತ್ತರ ಬಾರದಿದ್ದರೆ ಕ್ರಮ ಕೈಗೋಳುತ್ತಾರೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ಮಾಜಿ ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ನಾಲ್ವರಿಗೆ ಪಕ್ಷ ನೋಟಿಸ್ ನೀಡಿದೆ. ಕರೆದು ಮಾತನಾಡಿ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಯಬಹುದು. ಸಮಸ್ಯೆ ಬಗೆ ಹರಿಯದೆ ಇದ್ದರೆ ಪಕ್ಷ‌ ಅವರ ವಿರುದ್ದ ಕ್ರಮ ಕೈಗೊಳುತ್ತದೆ ಎಂದು ಸಚಿವ ಸತೀಶ್​ ಜಾರಕಿಹೊಳಿ ಹೇಳಿದರು .

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಅಭ್ಯರ್ಥಿ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಇನ್ನೂ ಎರಡು ಮೂರು ಸುತ್ತಿನ ಮಾತುಕತೆ ಆಗಬೇಕು. ಮರಾಠ, ಲಿಂಗಾಯತ ಎನ್ನುವ ಅಂಶಗಳನ್ನು ಅಭ್ಯರ್ಥಿ ಆಯ್ಕೆಯಲ್ಲಿ ಪರಿಗಣಿಸದೆ ಗೆಲ್ಲುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು .

ದೋಸ್ತಿ ಸರಕಾರದ ಬಗ್ಗೆ ಮಾತನಾಡಿದ ಅವರು ಸರಕಾರದ ಬಜೆಟ್ ಮಂಡನೆಯಾಗಲಿದೆ. ಸಿಎಂ ಕುಮಾರಸ್ವಾಮಿ ಅವರೆ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು .

loading...