ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ

0
20

ಕನ್ನಡಮ್ಮ ಸುದ್ದಿ-ನರಗುಂದ: ಪಟ್ಟಣದ ಹೊರವಲಯದಲ್ಲಿರುವ ಅನೇಕ ಬಡಾವಣೆಗಳು ಹಲವು ವರ್ಷಗಳಿಂದ ಮೂಲ ಸೌಲಭ್ಯಗಳಿಲ್ಲದೇ ವಂಚಿತಗೊಂಡಿವೆ. ಪ್ರಸಕ್ತ ನನ್ನ ಅಧಿಕಾರಾವಧಿಯಲ್ಲಿ ಅಭಿವೃದ್ಧಿಯಿಂದ ವಂಚಿತಗೊಂಡ ಬಡಾವಣೆಗಳನ್ನು ಗುರುತಿಸಿ ಹಂತಹಂತವಾಗಿ ಸಂಪೂರ್ಣ ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ಸಿ.ಸಿ.ಪಾಟೀಲ ತಿಳಿಸಿದರು.
ಪಟ್ಟಣದ ಬಸ್ ಡಿಪೋ ಹತ್ತಿರದ ಬಡಾವಣೆಗೆ ಚನ್ನಬಸವೇಶ್ವರ ನಗರ ಎಂದು ಹೆಸರಿಸಿದ ನೂತನ ನಾಮಫಲಕವನ್ನು ಸೋಮವಾರ ಅನಾವರಣಗೊಳಿಸಿ, ಅದೇ ಬಡಾವಣೆಯಲ್ಲಿ ಭೂಸೇನಾ ಇಲಾಖೆಯ 25 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ.ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಡಾವಣೆ ಸಾರ್ವಜನಿಕರ ಬಹು ದಿನಗಳ ಬೇಡಿಕೆಂತೆ 25 ಲಕ್ಷ ರೂ, ವೆಚ್ಚದಲ್ಲಿ ಸಿ.ಸಿ.ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರಿಗೆ ಕಿರಿಕಿರಿಯಾಗದಂತೆ ನಿಗಧಿತ ಅವಧಿಯಲ್ಲಿ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಬೇಕು. ಕಾಮಗಾರಿಯ ಗುಣಮಟ್ಟ ಕಳಪೆಯಾಗದಂತೆ ಭೂಸೇನಾ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರ ಮೇಲೆ ನಿರಂತರ ನಿಗಾವಹಿಸಬೇಕು. ಅಭಿವೃದ್ದಿಯ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳುವುದೆಂದು ತಿಳಿಸಿದರು.
ಚಂದ್ರು ಪವಾರ, ಉಮೇಶ ಕುಡೇನವರ, ಶಿವಾನಂದ ಮುತವಾಡ, ಬಸವಣ್ಣಿವ್ವ ಪಿಡ್ನಾಯ್ಕರ್, ಆರ್.ಬಿ.ಅಳಗವಾಡಿ, ಎಂ.ಡಿ.ಚವಡಿ, ಪ್ರಕಾಶ ಹಾದಿಮನಿ. ವಿನೋದ ವಡ್ಡರ, ಜಮದಗ್ನಿಋಷಿ ಪಾತ್ರೋಟಿ, ಮುತ್ತು ಪಾಟೀಲ, ಎಂ.ಎಂ.ಖಾಜಿ, ಮುತ್ತು ವಡ್ಡಿಗೇರಿ, ರಾಮಣ್ಣ ಕಳ್ಳಿಗುಡ್ಡ, ಜಿ.ಎನ್.ಕಲ್ಮಠ, ವಿಷ್ಣು ಭಾಟೀಯಾ, ಯಲ್ಲಪ್ಪ ಕಡಿವಾಲರ, ನಿಂಗಪ್ಪ ಮ್ಯಾದಾರ, ಸುಜಾತಾ ಕಾಳೆ, ಶಂಭು ಪವಾರ, ವ್ಹಿ.ಎಸ್.ಢಾಣೆ, ಯಲ್ಲಪ್ಪ ಪಿ, ಎಚ್.ಬಿ.ಅಸೂಟಿ, ಶಂಕ್ರಯ್ಯ ಹಿರೇಮಠ ಇದ್ದರು.

loading...