ವಿಟಿಯು ಇಬ್ಬಾಗಿಸದಂತೆ  ಒತ್ತಾಯಸಿ  ಕರ್ನಾಟಕ ನವ ನಿರ್ಮಾಣ ಪಡೆ ಪ್ರತಿಭಟನೆ

0
50

ವಿಟಿಯು ಇಬ್ಬಾಗಿಸದಂತೆ  ಒತ್ತಾಯಸಿ  ಕರ್ನಾಟಕ ನವ ನಿರ್ಮಾಣ ಪಡೆ ಪ್ರತಿಭಟನೆ

ಕನ್ನಡಮ್ಮ ಸುದ್ದಿ-ಬೆಳಗಾವಿ : ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಇಬ್ಬಾಗಿಸಲು ಹೊರಟಿರುವ ರಾಜ್ಯ ಸರಕಾರದ ನಿರ್ಣಯ ಖಂಡನೀಯ,ಕೂಡಲೇ ಸರಕಾರ ವಿಟಿಯು ಬಗ್ಗೆ ತೆಗೆದುಕೊಂಡ ನಿರ್ಣಯವನ್ನು ರದ್ದು ಪಡೆಸಬೇಕೆಂದು ಒತ್ತಾಯಿಸಿ ಕರ್ನಾಟಕ ನವ ನಿರ್ಮಾಣ ಪಡೆ ರಾಯಭಾಗ್ ತಾಲೂಕ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು .

ಮಂಗಳವಾರ ರಾಯಬಾಗ್ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಕನಪಾ ಕಾರ್ಯಕರ್ತರ ಯಾವುದೇ ಕಾರಣಕ್ಕೂ ವಿಟಿಯು ವಿಭಜನೆ ಮಾಡಬಾರದು ,ವಿಟಿಯು ಅಭಿವೃದ್ಧಿಗೆ ಸರಕಾರ ಅನುದಾನ ಬೀಡುಗಡೆ ಮಾಡಬೇಕೆಂದು ಆಗ್ರಹಿಸಿದರು .ಕನಪಾ ಮುಖಂಡ ಅರುಣ ಟಕ್ಕನ್ನವರ ಮಾತನಾಡಿ ವಿಟಿಯು ವಿಭಜಿಸುವ ಸರಕಾರದ ನಿಲುವು ಖಂಡನೀಯ ,ಕೂಡಲೇ ರಾಜ್ಯ ಸರಕಾರ ವಿಭಜನೆ ನಿರ್ಣಯ ರದ್ದು ಪಡೆಸಬೇಕು.ಇದು ಉತ್ತರ ಕರ್ನಾಟಕ ಜನತೆಗೆ ನೋವುಂಟು ಮಾಡಿದೆ.ಕುಮಾರ ಸ್ವಾಮಿ ಉತ್ತರ ಕರ್ನಾಟಕದ ಮೇಲೆ ಮಲತಾಯಿ ಧೋರಣೆ ಮುಂದುವರೆಸಿದ್ದಾರೆ ಎಂದು ಆರೋಪಿಸಿದರು.

ಈ ಸಂಧರ್ಬದಲ್ಲಿ ಕರ್ನಾಟಕ ನವ ನಿರ್ಮಾಣ ಪಡೆ ನೂರಾರು ಕಾರ್ಯಕರ್ತ,ವಿದ್ಯಾರ್ಥಿಗಳು ಇದ್ದರು.

loading...