ನಗರದ ಹೊರವಲಯದಲ್ಲಿ ರಿಂಗ್ ರೋಡ್ ನಿರ್ಮಾಣ

0
31

ಬೆಳಗಾವಿ ನಗರದ ಹೊರ ವಲಯದಲ್ಲಿ ರಿಂಗ್ ರೋಡ್ ನಿರ್ಮಾಣದಿಂದ ರೈತರು ಫಲವತ್ತಾದ ಭೂಮಿ ಕಳೆದುಕೊಳ್ಳುತ್ತಾರೆ. ಆದ್ದರಿಂದ ಮೊದಲು ರೈತರಿಗೆ ಪರಿಹಾರ ನೀಡಿ ಇಲ್ಲವೆ ರಿಂಗ್ ರೋಡ್ ಕ್ರಿಯಾಯೋಜನೆ ಕೈಬಿಡಬೇಕೆಂದು ತಾಲೂಕ ಪಂಚಾಯತ್ ಸದಸ್ಯರು ವಿರೋಧ ವ್ಯಕ್ತ ಪಡಿಸಿದ್ದಾರೆ. ಗುರುವಾರ ತಾಲೂಕ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿರೋಧ ವ್ಯಕ್ತ ಪಡಿಸಿದ್ದಾರೆ. ರಿಂಗ್ ರೋಡ್ ಕಮಿಟಿಯಲ್ಲಿ ಜಿಲ್ಲಾಡಳಿತ, ಶಾಸಕರು ಸೇರಿ ಬುದ್ಧಿ ಜೀವಿಗಳು ಇದ್ದಾರೆ. ಆದರೆ ರಿಂಗ್ ರೋಡ್ ತಯಾರಿಸಲು ರೈತರ ಫಲವತ್ತಾದ ಭೂಮಿಯನ್ನು ತೆಗೆದುಕೊಳ್ಳುತ್ತಿದೆ. ಜಮೀನಿಗೆ ತಕ್ಕ ಹಾಗೇ ಸರ್ಕಾರದಿಂದ ಪರಿಹಾರ ನೀಡಬೇಕು. ಪರಿಹಾರ ನೀಡಿದ ಬಳಿಕವೇ ರಿಂಗ್ ರೋಡ್ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ಈ ವಿಷಯವಾಗಿ ನಾಲ್ಕು ಜನ ತಾಲೂಕ ಪಂಚಾಯತ್ ಸದಸ್ಯ ಒಳಗೊಂಡ ಕಮಿಟಿ ರಚಿಸಿ ಸಿಇಓ ಅವರಿಗೆ ಪತ್ರದ ಮೂಲಕ ವರದಿ ನೀಡಬೇಕೆಂದು ಅಧ್ಯಕ್ಷರಿಗೆ ತಿಳಿಸಿದರು.

loading...