ವಿಟಿಯು ವಿಭಜನೆ ಹಿಂದೆ ರೇವಣ್ಣ ಮಾಸ್ಟರ್ ಮೈಂಡ್ .

0
22

ವಿಟಿಯು ವಿಭಜನೆ ಹಿಂದೆ ರೇವಣ್ಣ ಮಾಸ್ಟರ್ ಮೈಂಡ್: ದೇವೇಗೌಡರ ಹೆಸರಿನಲ್ಲಿ ಮತ್ತೊಂದು ಃ.ಡ್ ಎವನ್ನ ಎಚ್.ಡಿ ರೇವಣ್ಣ ಬೆಂಗಳೂರು: ಬೆಳಗಾವಿ ವಿಶ್ವೆÃಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ, ವಿಟಿಯು ವಿಭಜನೆಗೆ ಚುನಾಯಿತ ಪ್ರತಿನಿಧಿಗಳೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ವಿವಿ ವಿಭಜಿಸುವ ಹಿಂದೆ ಸಚಿವ ಎಚ್.ಡಿ ರೇವಣ್ಣ ಅವರ ಮಾಸ್ಟರ್ ಮೈಂಡ್ ಕೆಲಸ ಮಾಡಿದೆ ಎಂದು ಹೇಳಲಾಗುತ್ತಿದೆ. ಹಾಸನದಲ್ಲಿ ಮತ್ತೊಂದು ತಾಂತ್ರಿಕ ವಿಶ್ವ ವಿದ್ಯಾನಿಲಯ ಸ್ಥಾಪನೆ ಮಾಡಬೇಕೆಂಬ ರೇವಣ್ಣ ಆಸೆಗೆ ಬೆಳಗಾವಿ ವಿಟಿಯು ವಿಭಜನೆಯಾಗುತ್ತಿದೆ ಎದು ಹೇಳಲಾಗುತ್ತಿದೆ. ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಮತ್ತು ರೇವಣ್ಣ ಹಾಸನದಲ್ಲಿ ತಾಂತ್ರಿಕ ವಿಶ್ವ ವಿದ್ಯಾನಿಲಯ ಸ್ಥಾಪಿಸಿ ಅದಕ್ಕೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಹೆಸರಿಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ, ಬೆಳಗಾವಿ ತಾಂತ್ರಿಕ ವಿವಿಯನ್ನು ವಿಭಜಿಸಿ ಹೊಸ ವಿವಿ ಸ್ಥಾಪಿಸುವುದು ರೇವಣ್ಣ ಅವರ ಆಸೆಯಾಗಿದೆ, ಈ ಸಂಬಂಧ ಜಿ.ಟಿ ದೇವೇಗೌಡ ಅವರ ಜೊತೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಸಚಿವ ದೇವಗೌಡ ಅವರನ್ನು ಸಂಪರ್ಕಿಸಿದಾಗ ಅವರು ಒಪ್ಪಿಕೊಂಡಿದ್ದಾರೆ, ಹಾಸನದಲ್ಲಿ ಮತ್ತೊಂದು ವಿವಿ ಸ್ಥಾಪಿಸುವ ಸಂಬಂಧ ಚರ್ಚೆ ನಡೆಸಲಾಗಿದೆ, ಈ ಸಂಬಂಧ ಬಜೆಟ್ ನಲ್ಲಿ ಅನುದಾನ ಮೀಸಲಿಡಲಾಗಿದೆ, ಆದರೆ ಉನ್ನತ ಶಿಕ್ಷಣ ಇಲಾಖೆಯಿಂದ ಸಿಎಂ ಅವರಿಗೆ ಯಾವುದೇ ಪ್ರಸ್ತಾವನೆ ಕಳುಹಿಸಿಲ್ಲ ಎಂದು ಹೇಳಿದ್ದಾರೆ, ಆದರೆ ರೇವಣ್ಣ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. Kannadamma News Network is news and media company based out of Belagavi, Karnataka and covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food. #kannadammanewsnetwork

loading...