ಯೋಧರ ಸಾವಿಗೆ ಕತಾರ್ ಪ್ರಧಾನಿ ಸಂತಾಪ

0
3

ದೊಹಾ:- ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಗೆ ಹುತಾತ್ಮರಾದ ಯೋಧರ ಸಾವಿಗೆ ಕತಾರ್ ಪ್ರಧಾನಿ ಶೇಖ್ ಅಬ್ದಲ್ಲಾ ಬಿನ್ ನಾಸೀರ್ ಬಿನ್ ಖಲಿಫಾ ಅಲ್ ಥಾನಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಪ್ರಧಾನಿ ಮೋದಿಗೆ ಶೋಕ ಸಂದೇಶ ರವಾನಿಸಿರುವ ಅವರು, ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಪಾಕಿಸ್ತಾನ ಬೆಂಬಲಿತ ಜೈಶ್- ಎ- ಮೊಹಮ್ಮದ್ ಭಯೋತ್ಪಾದನೆ ಸಂಘಟನೆಯ ಹೇಯ ಕೃತ್ಯವನ್ನು ಜಾಗತಿಕ ಮಟ್ಟದಲ್ಲಿ ಖಂಡಿಸಲಾಗುತ್ತಿದ್ದು, ಭಾರತಕ್ಕೆ ತಮ್ಮ ಬೆಂಬಲ ಸೂಚಿಸಿವೆ.

loading...