ವಿಷಾನಿಲದಿಂದ ಏಳು ಮಂದಿ ಸಾವು

0
0

ಗ್ಯಾಂಗ್ ಝುವಾ, ಫೆ.16 (ಕ್ಸಿನುವಾ) ಚೀನಾದ ಗ್ಯಾಂಗ್ ಡಾಂಗ್ ಪ್ರಾಂತ್ಯದ ಕಾಗದ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ ವಿಷಾನಿಲ ಸೋರಿಕೆಯಾಗಿ 7 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.
ಡಾಂಗ್ ಗಾನ್ ನಗರದ ಝಾಂಗ್ ತಂಗ್ ಪ್ರದೇಶದಲ್ಲಿನ ಶಾಂಗ್ ಝೋ ಕಾಗದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಒಂಬತ್ತು ಕಾರ್ಮಿಕರು ಒಳಚರಂಡಿ ಹೊಂದಾಣಿಕೆ ಟ್ಯಾಂಕ್ ನಲ್ಲಿ ಸಿಕ್ಕಿ ಹಾಕಿಕೊಂಡು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸಾರ್ವಜನಿಕ ಇಲಾಖೆ ತಿಳಿಸಿದೆ.
ವಿಷಾನಿಲ ಸೇವನೆಯಿಂದ ಅಸ್ವಸ್ಥಗೊಂಡಿದ್ದ ಕಾರ್ಮಿಕರನ್ನು ಅಗ್ನಿ ಶಾಮಕ ದಳದವರು ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಏಳು ಮಂದಿ ಮೃತಪಟ್ಟಿದ್ದಾರೆ. ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದುರಂತ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

loading...