ರಾಮ ಮಂದಿರ ನಿರ್ಮಾಣ ಖಚಿತ: ಕೇಶವ ಪ್ರಸಾದ

0
21

ರಾಮ ಮಂದಿರ ನಿರ್ಮಾಣ ಖಚಿತ: ಕೇಶವ ಪ್ರಸಾದ
ಕನ್ನಡಮ್ಮ ಸುದ್ದಿ-ಬೆಳಗಾವಿ:ಬಿಜೆಪಿ ಸರ್ಕಾರ ರಾಮ ಮಂದಿರ ನಿರ್ಮಾಣ ಮಾಡುವುದಂತು ಖಚಿತ ಆದರೆ ಪ್ರಕರಣ ಸುಪ್ರಿÃಂ ಕೋರ್ಟ್ನಲ್ಲಿ ಇರುವುದರಿಂದ ಕಟ್ಟುವ ಕಾರ್ಯ ಕೈಗೊಂಡಿಲ್ಲ ವೆಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಪಡೆಯುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ದೇಶದ ಜನತೆಯ ಆಶೆಯು ಸಹ ಅದೇ ಆಗಿದೆ. ಐದು ವರ್ಷದಲ್ಲಿ ದೇಶದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಲಿದ್ದಾರೆ. ಇನ್ನೂ ಮೋದಿಯವರು ನಾಲ್ಕು ದಿನಗಳ ಹಿಂದೆ ಜಮ್ಮು ಕಾಶ್ಮಿÃರದ ಪುಲ್ವಾಮಾ ದಲ್ಲಿ ನಡೆದ ಆತ್ಮಾಹುತಿ ದಾಳಿಯಿಂದ ಸೈನಿಕ ಸಾವನ್ನಿಪ್ಪಿದ್ದಾರೆ. ಮೋದಿ ಸಹ ಸೈನಿಕರಿಗೆ ಸಾತ್ ನೀಡಿದ್ದಾರೆ. ಉಗ್ರರಿಗೆ ತಕ್ಕ ಪಾಠ ಕಲಿಸಲಾಗುತ್ತದೆ ಹಿಂದೆ ಸರಿಯೋ ಮಾತಿಲ್ಲ ಎಂದರು.
ಅಲ್ಲದೆ ರಾಮ ಮಂದಿರ ವಿಷಯ ಸುಪ್ರಿÃಂ ಕೋರ್ಟ್ನಲ್ಲಿ ಇರುವುದರಿಂದ ಮುಂದುವರೆಯಲಾಗುತ್ತಿಲ್ಲ. ಸುಪ್ರಿÃಂ ಕೋರ್ಟ್ ತೀರ್ಪು ಬಂದ ಬಳಿಕ ಬಿಜೆಪಿ ಪಕ್ಷ ರಾಮಮಂದಿರ ನಿರ್ಮಾಣ ಮಾಡುವದಂತು ಸತ್ಯವೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಸುರೇಶ ಅಂಗಡಿ, ಮಾಜಿ ಶಾಸಕ ವಿಶ್ವನಾಥ ಪಾಟೀಲ, ವಿಧಾನಪರಿಷತ್ ಸದಸ್ಯ ಮಾಹಾಂತೇಶ ಕವಟಗಿಮಠ, ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಂದ್ರ ಹರಕುಣಿ, ಬೆಳಗಾವಿ ನಗರ ಕಾರ್ಯದರ್ಶಿ ರಾಜಕುಮಾರ ಟೋಪಣ್ಣನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...