ಗೋಟುರ ಗ್ರಾಮದ ಯುವಕರಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

0
162

ಗೋಟುರ ಗ್ರಾಮದ ಯುವಕರಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ಫೆ.೧೪ ರಂದು ಜಮ್ಮು ಕಾಶ್ಮೀರದ ಪುಲ್ವಾಮ ದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರಿಗೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದ ಯುವಕರು ಮೌನಾಚರಣೆ ಮೂಲಕ ಮಡಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು .

ಸೋಮವಾರ ಗ್ರಾಮದ ಲಕ್ಷ್ಮಿ ದೇವಸ್ಥಾನದಿಂದ ಪ್ರಮುಖ ಬೀದಿಗಳ ಮೂಲಕ ಮೆಣದ ಬತ್ತಿ ಹಿಡಿದು ವೀರ ಮರಣ ಹೊಂದಿದ ಯೋಧರ ಪರ ಜೈಕಾರ ಕೂಗಿದರು .ಪಾಪಿ ಪಾಕಿಸ್ತಾನ ಪೋಷಿತ ಉಗ್ರರಿಗೆ ದಿಕ್ಕಾರ ಕೂಗಿದರು .

ಈ ಸಂಧರ್ಭದಲ್ಲಿ ಮಾತನಾಡಿದ ಯುವಕರು ದೇಶಕ್ಕಾಗಿ ಮಡಿದ ಯೋಧರಿಗಾಗಿ ಇಡಿ ದೇಶವೆ ದುಃಖದಲ್ಲಿದೆ . ಹೀನ ಕೃತ್ಯವೆಸಗಿದ ಉಗ್ರರಿಗೆ ತಕ್ಕ ಶಾಸ್ತಿಯಾಗಬೇಕು ಎನ್ನುವುದು ಪ್ರತಿಯೊಬ್ಬ ಯುವಕರ ಮಾತಾಗಿತ್ತು .ವೀರಯೋಧರ ತ್ಯಾಗ ಬಲಿದಾನವನ್ನು ಸೂರ್ಯ ಚಂದ್ರ ಇರೋವರೆಗೂ ಮರೆಯಲು ಸಾಧ್ಯವಿಲ್ಲ ಅವರ ದೇಶಸೇವೆ ಸ್ಪೂರ್ತಿದಾಯಕವಾಗಿದ್ದು ಅವರ ಸ್ಮರಣೆ ಕೇವಲ ಒಂದು ದಿನಕ್ಕೆ ಸೀಮೀತವಾಗಬಾರದು ನಿತ್ಯ ನಿರಂತರವಾಗಿರಬೇಕೆಂದರು .

ದುಂಡಪ್ಪ ರತ್ನಪ್ಪ ಕಮತೆ,ರುದ್ರಗೌಡ ಪಾಟೀಲ ,ಅಣ್ಣಾಗೌಡ ಪಾಟೀಲ,ಬಸವರಾಜ ಶೇಖನವರ ,ಮಲಗೌಡ ಪಾಟೀಲ,ಸಂತೊಷ ಹಳ್ಳೂರಿ ,ರಾಜು ಹತ್ತರಗು,ಶಾನೂರ ಹಳ್ಳೂರಿ,ಅಪಾಸಾಹೇಬ ನಾಯಿಕ,ಸಂತೋಷ ಶೇಖನ್ನವರ ಸೇರಿದಂತೆ ಇತರರು ಇದ್ದರು.

loading...