ಚನ್ನಮ್ಮ ನಗರದಲ್ಲಿ 24ಲಕ್ಷ ಚಿನ್ನಾಭರಣ‌ ಕಳ್ಳತನ

0
23

ಚನ್ನಮ್ಮ ನಗರದಲ್ಲಿ 24ಲಕ್ಷ ಚಿನ್ನಾಭರಣ‌ ಕಳ್ಳತನ

ಕನ್ನಡಮ್ಮ ಸುದ್ದಿ- ಬೆಳಗಾವಿ: ರಾಣಿ ಚನ್ನಮ್ಮ ನಗರದಲ್ಲಿ 24ಲಕ್ಷ ಮೌಲ್ಯದ ವಜ್ರ ಚಿನ್ನಾಭರಣ‌ ಕಳ್ಳತನ ಮಾಡಿರುವ‌ ಘಟನೆ ಸೋಮವಾರ ಸಂಜೆ ನಡೆದಿದೆ.

ಮೊದಲ ಹಂತದ ಬಸ್ ಸ್ಟಾಪ್ ಹತ್ತಿರ ರಾಜಶೇಖರ ಪಾಟೀಲ ಅವರ ಮನೆ ಇದೆ. ಅವರು 16ನೇ ತಾರೀಖು ತಮ್ಮ ಪತ್ನಿಯೊಂದಿಗೆ ಬೆಂಗಳೂರಿಗೆ ಹೋಗಿದ್ದರು. 18ರಂದು ಮರಳಿ ಬರುವಷ್ಟರಲ್ಲಿ ಕಿಟಕಿ ಗ್ರಿಲ್ ಮುರಿದು 670 ಗ್ರಾಮ ತೂಕದ ಚಿನ್ನ, ವಜ್ರದ ಆಭರಣ ಹಾಗೂ ಕೈ ಗಡಿಯಾರಗಳನ್ನು ಕಳ್ಳತನ ಮಾಡಲಾಗಿದೆ.

ಬಂಗಾರದ ಅವಲಕ್ಕಿ ಸರ 50 ಗ್ರಾಂ, 1.50 ಲಕ್ಷ ರೂ., ಬಂಗಾರದ ಗೆಜ್ಜೆ , 40 ಗ್ರಾಂ, 1.20 ಲಕ್ಷ ರೂ., ಬಂಗಾರದ ಶೃಂಗಾರ ಹಾರ 150 ಗ್ರಾಂ, 1.50 ಲಕ್ಷ ರೂ., ಬಂಗಾರದ ರೂಬಿ ಹಾರ 1.70 ಲಕ್ಷ ರೂ., ಬಂಗಾರದ ನೆಕ್ ಲೆಸ್ 1.20 ಲಕ್ಷ ರೂ., ಬಂಗಾರದ ಮಂಗಳ ಸೂತ್ರ 1.50 ಲಕ್ಷ ರೂ., ವಜ್ರದ ಲಾಕೆಟ್ ಇದ್ದ 2 ಬಂಗಾರದ ಮಂಗಳ ಸೂತ್ರ 2.80 ಲಕ್ಷ ರೂ., ಬಂಗಾರದ ಪಾಟ್ಲಿ 2 ಜೊತೆ 3.70 ಲಕ್ಷ ರೂ., ಬಂಗಾರದ ರೂಬಿ ಬಳೆ ಒಂದು ಜೊತೆ 1.20 ಲಕ್ಷ ರೂ., ಬಗಾರದ ರೂಬಿ ಕಿವಿಯೋಲೆ ಒಂದು ಜೊತೆ 60 ಸಾವಿರ ರೂ., ಬಂಗಾರದ ಜುಮಕಿ 2 ಜೊತೆ 60 ಸಾವಿರ ರೂ., ಬಂಗಾರದ ಸಣ್ಣ ಜೈನ್ 2 ಜೊತೆ 45 ಸಾವಿರ ರೂ., ವಜ್ರದ ಟಾಪ್ 1 ಲಕ್ಷ ರೂ., ಬಂಗಾರದ ರೂಬಿ ಕಿವಿಯೋಜೆ 35 ಸಾವಿರ ರೂ., ಮುಂತ್ತು ಮತ್ತು ಹವಳದ ಕಿವಿಯೋಲೆ 30 ಸಾವಿರ ರೂ., ಲಾಕೆಟ್ 15 ಸಾವಿರ ರೂ., 3 ಉಂಗುರ 45 ಸಾವಿರ ರೂ., ಟೈಟಾನ್ ಕೈ ಗಡಿಯಾರ 15 ಸಾವಿರ ರೂ. ಕಳ್ಳತನವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

loading...