ಗ್ರಾಮೀಣ ಭಾಗಗಳಲ್ಲಿ ತಲೆಯೆತ್ತಿದ ಜುಗಾರಿ ಅಡ್ಡೆಗಳು

0
50

ಕೆ.ಎಂ.ಶರಣಯ್ಯ
ಗಂಗಾವತಿ: ನಗರದಲ್ಲಿ ರಿಕ್ರಿಯೇಷನ್ ಕ್ಲಬ್‌ಗಳ ನೆಪದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿದ್ದ ಜುಗಾರಿ ಅಡ್ಡೆಗಳಿಗೆ ಸದ್ಯಕ್ಕೆ ಬೀಗ ಬಿದ್ದಿದೆ. ನಗರದಲ್ಲಿ ಪೊಲೀಸ್ ಇಲಾಖೆ ಮುಗಿಬಿದ್ದು ಜುಗಾರಿಕೋರರನ್ನು ಹೆಡೆಮುರಿ ಕಟ್ಟಿ ಕೇಸ್ ಜಡಿಯುತ್ತಿದ್ದಂತೆ ನಗರಬಿಟ್ಟ ಜುಗಾರಿಗಳು ಸದ್ಯಕ್ಕೆ ತಾಲೂಕಿನ ಹೊರವಲಯದ ತೋಟಗಳಿಗೆ ವಲಸೆ ಹೋಗಿದ್ದಾರೆ. ಕೆಲವರು ಗುಡ್ಡಗಾಡುಗಳಲ್ಲಿ ಅಂದರ್‌ಬಾಹರ್ ಆರಂಭಿಸಿದ್ದರೆ, ಇನ್ನು ಕೆಲವರು ತೋಟದ ಮನೆಗಳಲ್ಲಿ ತಮ್ಮ ಕಸುಬನ್ನು ಆರಂಭಿಸಿದ್ದಾರೆ. ಈ ಕುರಿತು ವಿಸ್ತçೃತ ವರದಿ ಇಲ್ಲಿದೆ.

ಗಂಗಾವತಿ ನಗರ ದಿನೇ ದಿನೇ ವಾಣಿಜ್ಯ ನಗರವಾಗಿ ಅಭಿವೃದ್ಧಿ ಹೊಂದುತ್ತಿದೆ. ಆರ್ಥಿಕವಾಗಿ ದಾಪುಗಾಲಿಟ್ಟಿರುವ ಈ ನಗರದಲ್ಲಿ ಸಾಕಷ್ಟು ಕಳ್ಳ ದಂಧೆಗಳಿವೆ ಎಂಬುವುದರಲ್ಲಿ ಅನುಮಾನವಿಲ್ಲ. ನಿಷ್ಠೆಯಿಂದ ದುಡಿದು ತಿನ್ನುವ ಜನರಿಗೇನೂ ಬರವಿಲ್ಲ. ಆದರೆ, ಇವೆರಡಕ್ಕೂ ಸಲ್ಲದ ಸೋಮಾರಿಗಳ ತಂಡವೊಂದು ಅದೃಷ್ಠವನ್ನೆÃ ನಂಬಿಕೊಂಡು ಹಗಲಿರುಳು ಜೂಜಾಟದಲ್ಲಿ ತೊಡಗಿಕೊಂಡಿವೆ. ಸದ್ಯಕ್ಕೆ ನಗರದಲ್ಲಿ ಕ್ಲಬ್‌ಗಳು ಬಾಗಿಲು ಹಾಕಿಕೊಂಡಿವೆ. ಹೀಗಾಗಿ ಚಡಪಡಿಕೆಯಲ್ಲಿದ್ದ ಜುಗಾರಿಕೋರರಿಗೆ ನಗರದ ಹೊರವಲಯದ ಗುಡ್ಡಗಾಡುಗಳು, ತೋಟದ ಮನೆಗಳು ಸ್ವರ್ಗದಂತಾಗಿವೆ. ಇಂತಹವರಿಗಾಗಿಯೇ ಸಕಲ ಸೌಲಭ್ಯವನ್ನು ಕಲ್ಪಿಸುವ ಕೆಲವು ಸೋಕಾಲ್ಡ್ ನಾಯಕರುಗಳು ಸದ್ಯಕ್ಕೆ ಗರಿಗರಿ ನೋಟು ಎಣಿಸುತ್ತಿದ್ದಾರೆ.
ನಗರದ ಸಿದ್ದಿಕೇರಿಯಿಂದ ತುಂಗಭದ್ರಾ ಬಲದಂಡೆ ಕಾಲುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕೆಲ ಭಾಗಗಳಲ್ಲಿ ಸಣ್ಣಪುಟ್ಟ ಜುಗಾರಿಗಳು ತಮ್ಮ ಕಸುಬು ಆರಂಭಿಸಿದ್ದರೆ, ಕಾಲುವೆಯ ಎಡದಂಡೆಯ ನಾಯಕರೊಬ್ಬರ ಹೊಲದಲ್ಲಿ ನಿತ್ಯ ಕಾರ್ಡ್ಸ್ಗಳ ಕಲರವ ಕೇಳಿಬರುತ್ತಿವೆ. ಹೊಲದ ಮಾಲೀಕರ ವಿರೋಧದ ನಡುವೆಯೂ ಠಿಕಾಣಿ ಹೂಡುವ ಜುಗಾರಿಕೋರರು ಮಾಲಕರನ್ನೆÃ ಬೆದರಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಬಿಜೆಪಿಯ ಕಾರ್ಯಕರ್ತನೊಬ್ಬ ಇದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಮಾಹಿತಿ ಇದೆ. ಪ್ರತಿಯೊಬ್ಬರಿಂದ ೫೦೦ ರೂ.ಗಳನ್ನು ವಸೂಲಿ ಮಾಡುವ ಈ ಕ್ರಿಮಿ, ಹಣ ನೀಡುವ ಗಿರಾಕಿಗಳಿಗೆ ಕುಳಿತಲ್ಲಿಯೇ ಅನ್ನ, ನೀರು ಹಾಗೂ ಎಣ್ಣೆಯ ವ್ಯವಸ್ಥೆ ಮಾಡುತ್ತಾನೆ ಎನ್ನಲಾಗುತ್ತಿದೆ. ನಗರದಿಂದ ಅಲ್ಲಿಗೆ ಹೋಗುವ ಜುಗಾರಿಕೋರರು ಕವಲು ರಸ್ತೆಯ ಪೊದೆಗಳಲ್ಲಿ ತಮ್ಮ ವಾಹನಗಳನ್ನು ಇಟ್ಟು ಕಾಲುದಾರಿಯಲ್ಲಿ ಸಾಗುತ್ತಾರೆ. ಮಾಧ್ಯಮದವರಾಗಲಿ ಅಥವಾ ಅಪರಿಚಿತರು ಅನಿರೀಕ್ಷಿತವಾಗಿ ಆ ರಸ್ತೆಯಲ್ಲಿ ಹೋದರೆ ನಡು ರಸ್ತೆಯಲ್ಲಿಯೇ ವಿಚಾರಿಸಲಾಗುತ್ತಿದೆ. ಜುಗಾರಿ ಅಡ್ಡೆ ತಲುಪುವ ಮೊದಲೇ ಹಂತ ಹಂತವಾಗಿ ನಾಲ್ಕು ಜನರಿಂದ ವಿಚಾರಣೆ ನಡೆಯುತ್ತದೆ. ಅನುಮಾನ ಬಂದಲ್ಲಿ ಮನಬಂದಂತೆ ಥಳಿಸಿ ಆಗಂತುಕರು ಅಲ್ಲಿಂದ ಪೇರಿಕೀಳುತ್ತಾರೆ. ಈ ಬಗ್ಗೆ ಸ್ವತಃ ಹೊಲದ ಮಾಲೀಕ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಆದರೆ, ಅದ್ಹೆÃಕೋ ಏನೋ ಇವರಿಗೆ ಪೊಲೀಸರಿಗೆ ದೂರು ನೀಡಲು ಭಯ. ಇನ್ನು ವಾನಭದ್ರಪ್ಪ ಗುಡ್ಡ, ಪಾಪಯ್ಯ ಟನಲ್ ಸುತ್ತಮುತ್ತಲಿನ ಹಲವೆಡೆ ಜೂಜುಕೋರರ ಜಾತ್ರೆ ನಿರಾತಂಕವಾಗಿ ನಡೆದಿದೆ ಎನ್ನಲಾಗುತ್ತಿದೆ.

ಇನ್ನು ವೆಂಕಟಗಿರಿ, ಉಡುಮಕಲ್ಲ ಹಾಗೂ ಬಂಕಾಪುರದ ಕೆಲವು ತೋಟದ ಮನೆಗಳಲ್ಲಿ ಅಂದರ್ ಬಾಹರ್ ಹವಾ ಜೋರಾಗಿಯೇ ಇದೆ. ರಾಜಕೀಯ ಪ್ರಮುಖ ಮುಖಂಡರೊಬ್ಬರ ತೋಟದ ಮನೆಯಲ್ಲಿ ಭಾರೀ ಭದ್ರತೆಯೊಂದಿಗೆ ಜೂಜಾಟ ನಡೆಸಲಾಗುತ್ತಿದೆ. ಇಲ್ಲಿ ಸ್ಥಳೀಯರಿಗೆ ಆದ್ಯತೆ ಬಹಳ ಕಡಿಮೆ ಇದೆ ಎನ್ನಲಾಗುತ್ತಿದೆ. ಕುಷ್ಟಗಿ, ಇಲಕಲ್ಲ, ಬಾಗಲಕೋಟೆ, ಸಿರುಗುಪ್ಪ, ಬಳ್ಳಾರಿ, ರಾಯಚೂರು ಸೇರಿದಂತೆ ಆಂಧ್ರದ ಪ್ರಮುಖ ಜುಗಾರಿಗಳಿಗೆ ಸ್ವರ್ಗದಂತಿರುವ ಈ ತೋಟದ ಮನೆಯಲ್ಲಿ ಸಂಜೆಯಾಗುತ್ತಿದ್ದಂತೆಯೇ ಕಾರ್ಡ್ಸ್ಗಳ ಕಲರವ ಆರಂಭವಾಗುತ್ತದೆ. ಮುಂಜಾವಿನವರೆಗೂ ನಡೆಯುವ ಜೂಜಾಟದಲ್ಲಿ ಲಕ್ಷಾಂತರ ಹಣ ಕೈ ಬದಲಾವಣೆಯಾಗುತ್ತದೆ. ಸಮೀಪದ ರ‍್ಹಾಳ ಸೇರಿದಂತೆ ಸುತ್ತಮುತ್ತಲಿನ ಸಾಕಷ್ಟು ಜನ ಶ್ರಿÃಮಂತರು ಇಂದು ಹೊಲ, ಮನೆ ಮಾರಿಕೊಂಡು ಬೀದಿಗೆ ಬಿದ್ದಿದ್ದಾರೆ. ಹಲವಾರು ವರ್ಷಗಳಿಂದ ಇಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗೆ ಇಂದಿಗೂ ಕಡಿವಾಣ ಬಿದ್ದಿಲ್ಲ. ಇದಕ್ಕೆಲ್ಲ ಪ್ರಭಾವಿ ರಾಜಕಾರಣಿಗಳ ಸಹೋದರರ ಪ್ರಭಾವ ಕಾರಣ ಎನ್ನಲ್ಲಾಗುತ್ತಿದೆ. ಇಲ್ಲಿಯೂ ಕೂಡ ಅಪರಿಚಿತರಿಗೆ ಪ್ರವೇಶವಿಲ್ಲ.
ಇನ್ನು ನಗರದ ಕೆಲವು ಮನೆಗಳಲ್ಲಿ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ದಲ್ಲಾಳಿ ಅಂಗಡಿಗಳಲ್ಲಿ ಜುಗಾರಿಗಳ ತಂಡ ಭರ್ಜರಿ ಚಪ್ಪಾಳೆ ತಟ್ಟುತ್ತಿದೆ. ಇವುಗಳ ಬಗ್ಗೆ ಪೊಲೀಸರು ಗೊತ್ತೂ ಗೊತ್ತಿಲ್ಲದಂತೆ ಇದ್ದಾರೆ. ಯಾಕೆಂದರೆ, ದೊಡ್ಡವರ ಸಹವಾಸ ಅಧಿಕಾರಿಗಳಿಗೆ ವನವಾಸ ಎಂಬ ಕಟುವಾಸ್ತವ ಅಧಿಕಾರಿಗಳಿಗೆ ಹಿಂದೇಟು ಹಾಕುವಂತೆ ಮಾಡಿದೆ. ನಗರದಲ್ಲಿ ಮೇಲ್ನೊÃಟಕ್ಕೆ ಅಧಿಕೃತವಾಗಿ ಎಲ್ಲಾ ಜುಗಾರಿ ಅಡ್ಡೆಗಳು ಬಂದಾಗಿದ್ದರೂ ಹೀಗೆ ಕೆಲವೆಡೆ ಕಾರ್ಡ್ಸ್ಗಳ ಕಲರವ ಜೋರಾಗಿಯೇ ಇದೆ. ಈ ಗ್ಯಾಂಗುಗಳ ಬೆನ್ನಿಗೆ ಶಾಸಕರ ಪುತ್ರನ ಸ್ನೆÃಹಿತರ ಬೆಂಗಾವಲು ಇದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಶಾಸಕ ಪರಣ್ಣ ಮುನವಳ್ಳಿ ಗಂಭೀರವಾಗಿ

ಯೋಚಿಸಬೇಕು. ಯಾಕೆಂದರೆ, ಶಾಸಕ ಪರಣ್ಣ ಮುನವಳ್ಳಿಯಂತಹವರ ಹೆಸರು ಜುಗಾರಿ ಅಡ್ಡೆಗಳ ರಕ್ಷಣೆಗೆ ಬಳಕೆಯಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ.

loading...