ಕತ್ತಿ ಸಹೋದರರಲ್ಲಿ ಯಾವುದೇ ರೀತಿ ಬಂಡಾಯವಿಲ್ಲ

0
68
  • ಬೆಳಗಾವಿ: ಸಂಧಾನ ಮಾಡಲು ಬಂದಿಲ್ಲ. ಬಿಜೆಪಿ ಶಿಸ್ತಿನ ಪಕ್ಷ ಎಲ್ಲರು ಒಗ್ಗಟ್ಟಿನಿಂದ ಇದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

    ಸೋಮವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
    ರಮೇಶ ಕತ್ತಿಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷದ ತೋರೆಯುತ್ತಾರೆ ಎಂಬ ವಿಷಯ ಅದು ವದಂತಿ. ಉಮೇಶ ಕತ್ತಿ, ರಮೇಶ ಕತ್ತಿ ಸೇರಿಕೊಂಡು ಚಿಕೋಡಿ ಕ್ಷೇತ್ರ ಗೆಲುವಿಗೆ ಪ್ರಯತ್ನ ಮಾಡುತ್ತಾರೆ ಎಂದರು.

    ರಾಹುಲ್ ಗಾಂಧಿ ಒಬ್ಬ ಬೇಜವಾಬ್ದಾರಿ ಮನುಷ್ಯ. ಡೈರಿಯಲ್ಲಿ ಎಲ್.ಕೆ ಅಡ್ವಾಣಿ ಹಣ ಕೊಟ್ಟ ಬರೆದಿದ್ದನಂತೆ.ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿರುವುದು ನಕಲಿ ಎಂದು ತಿಳಿದಿದೆ. ಹಣ ನೀಡಿದ್ದನ್ನು ಕಾಂಗ್ರೆಸ್ ಖಚಿತ ಪಡಿಸಲಿ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಹರಿಹಾಯ್ದರು.

    ಕಾಂಗ್ರೆಸ್ ಅಧ್ಯಕ್ಷ ಮಾಡುತ್ತಿರುವ ಅಪಪ್ರಚಾರ ಶೋಭೆ ತರಲ್ಲ. ಆರೋಪ ಸಾಬೀತಾದರೇ ರಾಜಕೀಯ ನಿವೃತ್ತಿ‌ ಪಡೆತುತ್ತೇನೆ ರಾಹುಲ್ ಗಾಂಧಿ ಲೋಕಸಭೆ ಚುನಾವಣೆ ಸೋಲು ತಪ್ಕೊಂಡಿದ್ದಾರೆ. ಅವನ್ನೊಬ್ಬ ಬಚ್ಚಾ ಅವರ ಮಾತಿಗೆ ಕಿಮ್ಮತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಂಡ್ಯ ಲೋಕಸಭೆ ಚುನಾವಣೆ ಹಿನ್ನೆಲೆ.ನಿಖಿಲ್ ಕುಮಾರಸ್ವಾಮಿ ನಾಮಪತ್ರ ರದ್ದ ಆಗಲಿದೆ.ಈಗ ಆಗದೇ ಇದ್ರೆ ಮುಂದೇ ಕೋರ್ಟ್ ನಲ್ಲಿ ಆಗಲಿದೆ. ಸಿಎಂ ಸೋಲಿನ ಭೀತಿಯಿಂದ ಹತಾಶರಾಗಿದ್ದಾರೆ. ಮಂಡ್ಯ ಚುನಾವಣೆ ಅಧಿಕಾರಿಯನ್ನ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.

loading...