ಸ್ಪರ್ಧೆಯಲ್ಲಿ ಯಶಸ್ಸಿಗೆ ವಿಶೇಷ ಕೌಶಲ್ಯ ಅಗತ್ಯ: ಯರಿಸ್ವಾಮಿ

0
11

 

ಕನ್ನಡಮ್ಮ ಸುದ್ದಿ-ಯಲಬುರ್ಗಾ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬೇಕಾದರೆ ಕೇವಲ ಪದವಿಯೊಂದಿದ್ದರೆ ಸಾಲದು ಜೊತೆಗೆ ವಿಶೇಷ ಕೌಶಲ್ಯ ಹಾಗೂ ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು ಎಂದು ಸ್ಮಾರ್ಟ್ ಕರಿಯರ್ ಅಕಾಡೆಮಿಯ ನಿರ್ದೇಶಕ ಯರಿಸ್ವಾಮಿ ಹೇಳಿದರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಅಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉನ್ನತ ಹುದ್ದೆ ಅಥವಾ ಸ್ಥಾನಮಾನ ಕಂಡುಕೊಳ್ಳಬೇಕಾದರೆ ಪರಿಶ್ರಮ ಹಾಗೂ ನಿರಂತರ ಪ್ರಯತ್ನ ಅಗತ್ಯವಿದೆ. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಕೈಗೊಳ್ಳುವ ಪ್ರಯತ್ನ ಕಾಟಾಚಾರದ್ದಾಗಿರದೇ ಸಾರ್ಥಕತೆ ಕಂಡುಕೊಳ್ಳುವ ಮಟ್ಟಿಗೆ ಇರುವುದು ಅಗತ್ಯ ಎಂದರು. ಐಕ್ಯೂಎಸಿ ಸಂಚಾಲಕ ಎ.ಬಿ. ಕೆಂಚರಡ್ಡಿ ಮಾತನಾಡಿ, ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ, ವ್ಯಕ್ತಿತ್ವ ವಿಕಾಸ ಹಾಗೂ ಕೌಶಲಗಳ ಕುರಿತು ಮಾಹಿತಿ ನೀಡುತ್ತಿರುವುದು ಕಾಲೇಜಿನಲ್ಲಿ ಕಳೆದ ಮರ‍್ನಾಲ್ಕು ವರ್ಷಗಳಿಂದಲೂ ಅಂiÉÆÃಜಿಸಲಾಗುತ್ತಿದೆ. ಇದು ಒಳ್ಳೆಯ ಪರಿಣಾಮ ಬೀರಿದ್ದರಿಂದ ಪದವಿ ಮುಗಿದ ಕೂಡಲೇ ಸಾಕಷ್ಟು ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದಾರೆ. ಇದರಿಂದ ಕಾಲೇಜು ಹಮ್ಮಿಕೊಳ್ಳುತ್ತಿರುವ ಕಾರ್ಯಾಗಾರವು ಸಾರ್ಥಕ ಪಡೆದುಕೊಳ್ಳುತ್ತಿದೆ ಎಂದರು. ಪ್ರಾಚಾರ್ಯ ಡಾ. ಶಿವರಾಜ ಗುರಿಕಾರ ಮಾತನಾಡಿ, ಕಾರ್ಯಾಗಾರದಲ್ಲಿ ಕಲಿಕೆಯ ಜೊತೆಗೆ ಮನೆಯಲ್ಲಿಯೂ ಹೆಚ್ಚಿನ ಅಭ್ಯಾಸ ಮತ್ತು ಪ್ರಯತ್ನ ಮುಖ್ಯವಾಗಿದೆ. ಯಾವ ರೀತಿಯಲ್ಲಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಕಠಿಣವಾಗಿರುವುದನ್ನು ಕಡಿಮೆ ಸಮಯದಲ್ಲಿ ಸುಲಭವಾಗಿ ಸರಳಮಾಡಿಕೊಳ್ಳಬೇಕು ಎಂಬ ತಂತ್ರಗಳನ್ನು ತರಬೇತಿಯಲ್ಲಿ ಹೇಳಿಕೊಡಲಾಗುತ್ತದೆ. ಅದನ್ನು ಸರಿಯಾಗಿ ಪಾಲಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ನುಡಿದರು.

ಸಹಾಯಕ ಪ್ರಾಧ್ಯಾಪಕ ವೈ.ಬಿ. ಅಂಗಡಿ, ಕೆ.ಎಚ್. ಛತ್ರದ್, ಇಬ್ರಾಹಿಂ ಕುದ್ರಿಮೋತಿ, ಎಚ್.ಎನ್, ಗುಡಿಹಿಂದಿನ್, ವೀರೇಶ ಗಜೇಂದ್ರಗಡ, ಮಂಜುಳಾ ಮಡಿವಾಳರ, ಶರಣಪ್ಪ ಗುಡ್ಲಾನೂರ, ಯು.ಬಿ. ಹಿರೇಮಠ, ಸಂಪನ್ಮೂಲ ವ್ಯಕ್ತಿ ಶಾಜದ್ ಅಲಿ ಇದ್ದರು.

loading...