ಬಾಲ ಕಾರ್ಮಿಕ ನಿರ್ಮೂಲನೆಗೆ ಕೈ ಜೋಡಿಸಿ: ಕಾಳೇಶ

0
24
ಕನ್ನಡಮ್ಮ ಸುದ್ದಿ-ಯಲಬುರ್ಗಾ: ಪ್ರತಿಯೊಬ್ಬರು ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು ಎಂದು ಚಿಕ್ಕಮ್ಯಾಗೇರಿ ರಂಗ ಚೇತನ ಕಲಾ ಸಂಸ್ಥೆಯ ಅಧ್ಯಕ್ಷ ಕಾಳೇಶ ಕಮ್ಮಾರ ಮನವಿ ಮಾಡಿದರು.

ತಾಲೂಕಿನ ಭೈರನಾಯಕನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಹಮ್ಮಿಕೊಂಡಿದ್ದ ಬೀದಿ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ ಅವರು. ಗ್ರಾಮೀಣ ಭಾಗದಲ್ಲಿ ಬೀಜೋತ್ಪಾದನೆ ಬೆಳೆಗಳನ್ನು ಬೆಳೆಯನ್ನು ಪಾಲಕರು ತಮ್ಮ ಮಕ್ಕಳನ್ನು ಜಮೀನಿನಲ್ಲಿ ದುಡಿಮೆಗೆ ಬಳಸಿಕೊಳ್ಳುತ್ತಿರುವುದು ವಿಷಾದನೀಯ. ಅಲ್ಲದೆ ಹೋಟೆಲ್ ಮತ್ತು ಕೋಳಿ ಫಾರಂಗಳಲ್ಲಿ ಕೆಲಸಕ್ಕೆ ಕಳಿಸುವುದು ಅಪರಾಧವಾಗಿದೆ. ಸರಕಾರ ಎಲ್ಲ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು ಎನ್ನುವ ನಿಟ್ಟಿನಲ್ಲಿ ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ಜಾರಿ ತಂದಿದೆ. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳದೇ ಅವರಿಗೆ ಕನಿಷ್ಠ ಶಿಕ್ಷಣವನ್ನಾದರು ನೀಡಬೇಕು ಎಂದರು.
ಬೀದಿ ನಾಟಕ ಪ್ರದರ್ಶ: ಚಿಕ್ಕಮ್ಯಾಗೇರಿ ರಂಗ ಚೇತನ ಕಲಾ ಸಂಸ್ಥೆಯ ಕಲಾವಿದರಾದ ಸಂಗಮೇಶ ದಪೇದ, ಶರಣಪ್ಪ ಮೇಟಿ, ಹುಸೇನಸಾಬ ವಣಗೇರಿ, ಸಿದ್ದಪ್ಪ ಕಾಟ್ರಳ್ಳಿ, ರಮೇಶ ನಡುಲಕೇರಿ, ಸುಲೋಚನಾ ಪೂಜಾರ, ಸಾವಿತ್ರಿ ದೇವಲಾಪುರ ಇತರರು ಬೀದಿ ನಾಟಕದ ಮೂಲಕ ೧೪ ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುವುದು ಅಪರಾಧವೆಂದು ಸಾರ್ವಜನಿಕರಿಗೆ ಮನದಟ್ಟು ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆತಯರು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಇದ್ದರು.

loading...