ಮತದಾನ ಜಾಗೃತಿಗಾಗಿ ಮ್ಯಾರಾಥಾನ್, ಬೀದಿ ನಾಟಕ ಪ್ರದರ್ಶನ

0
16

ಕನ್ನಡಮ್ಮ ಸುದ್ದಿ-ತೇರದಾಳ: ಕಳೆದ ಚುನಾವಣೆಯಲ್ಲಿ ಕಡಿಮೆ ಪ್ರತಿಶತ ಮತದಾನವಾಗಿದ್ದು, ಪ್ರಜ್ಞಾವಂತರಾದ ಮತದಾರರು ಅದರಿಂದ ವಿಮುಖವಾಗಬಾರದು. ಅದು ಪ್ರತಿಪ್ರಜೆಯ ಮೂಲಭೂತ ಹಕ್ಕು. ಆದ್ದರಿಂದ ಈ ಬಾರಿ ಎಲ್ಲರೂ ತಪ್ಪದೆ ಮತದಾನ ಮಾಡಿ, ಶೇ. ನೂರರಷ್ಟು ಮತದಾನವಾದ ಕ್ಷೆÃತ್ರವೆಂಬ ಹೆಗ್ಗಳಿಕೆಗೆ ಎಲ್ಲರು ಪಾತ್ರರಾಗೋಣ ಎಂದು ಎಸ್‌ಡಿಎಂ ಟ್ರಸ್ಟ್ನ ಚೇರಮನ್ ಡಾ. ಎಂ.ಎಸ್. ದಾನಿಗೊಂಡ ಹೇಳಿದರು.
ನಗರದ ಎಸ್‌ಡಿಎಂ ಟ್ರಸ್ಟ್ನ ಡಾ.ಸಿದ್ದಾಂತ್ ದಾನಿಗೊಂಡ ಸೇಂಟ್ರಲ್ ಸ್ಕೂಲ್, ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸೇರಿದಂತೆ ಡಿಜಿಐ ಶಿಕ್ಷಣ ಸಮೂಹ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಜರೂಗಿದ ಮ್ಯಾರಥಾನ್ ಮತ್ತು ಬೃಹತ್ ಮತದಾನ ಜಾಗೃತಿ ಅಭಿಯಾನಕ್ಕೆ ಕ್ಷೆÃತ್ರಾಧಿಪತಿ ಅಲ್ಲಮಪ್ರಭುದೇವರ ದೇವಸ್ಥಾನದ ಮುಂದೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಮತದಾನವಾಗುವುದಕ್ಕಿಂತ ನಗರ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ಮತದಾನದಂದು ಬೇರಾವುದೊ ಕಾರ್ಯಕ್ಕೆ ಹೋಗಿ ಮತ ಹಾಕುವುದನ್ನು ತಪ್ಪಿಸಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಮಾನ ಮಾಡಿದಂತೆ. ಮನೆಗೆ ಬೇಕಾದ ವಸ್ತುಗಳನ್ನು ಪಡೆಯುವಾಗ ಗುಣಮಟ್ಟದ ಬಗ್ಗೆ ಪರಿಶೀಲಿಸುವಂತೆ ಐದು ವರ್ಷಗಳವರೆಗೆ ಅಭಿವೃದ್ಧಿ ಮಾಡಬಹುದಾದ ಉತ್ತಮ ನಾಯಕನ್ನು ಆರಿಸುವ ಏಕೈಕ ಸದವಕಾಶವೆ ಮತದಾನವಾಗಿರುತ್ತದೆ ಎಂದರು.
ರಂಗೇರಿಸಿದ ಬೀದಿ ನಾಟಕ: ಯಾರು ಆರಿಸಿ ಬಂದರೇನಂತೆ ನಮಗೆ ದುಡಿಯುವುದು ತಪ್ಪಿಲ್ಲ. ಆದ್ದರಿಂದ ಮತ ಹಾಕುವ ಕೇಂದ್ರಕ್ಕೆ ಹೋಗದೆ ಬೇರೆ ಕೆಲಸಕ್ಕೆ ಹೋಗುವುದಾಗಿ ಹೇಳಿದ ವ್ಯಕ್ತಿಗೆ ಮತದಾನದ ಮಹತ್ವ ತಿಳಿಸಿ ಹೇಳುವ ಬೀದಿ ನಾಟಕವನ್ನು ಪ್ರಸ್ತುತ ಪಡಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು. ಸಿಬಿಎಸ್‌ಇ ಪ್ರಾಚಾರ್ಯರಾದ ನಾಗರತ್ನಾ ಜೋಶಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಡಾ. ರವಿ ಜಮಖಂಡಿ, ಡಾ. ಪುಷ್ಪದಂತ ದಾನಿಗೊಂಡ, ಪುರಸಭೆ ಮುಖ್ಯಾಧಿಕಾರಿ ಮಹಾವೀರ ಬೋರನ್ನವರ, ಮಾಜಿ ಯೋಧ ಸುರೇಂದ್ರ ತಳವಾರ ಮತದಾನ ಕುರಿತು ಮಾತನಾಡಿದರು. ಅಜೀತ್ ದೇಸಾಯಿ, ಸಿದ್ಧು ಹಾವೋಜಿ, ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಬಿ. ಅಪರಾಜ, ಡಾ.ಬಿ.ಬಿ. ಉಗಾರೆ, ಮಹೇಶ ಧರೆನ್ನವರ, ಎಸ್.ಬಿ. ಗೊಬ್ಬೂರ, ವಾಸುದೇವ ಜೋಶಿ, ಶಾಂತಕುಮಾರ ಪರಮಗೊಂಡ ಸೇರಿದಂತೆ ಅನೇಕ ಮುಖಂಡರು, ಯುವಕರು, ಸಂಸ್ಥೆಯ ೮೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಬಳಗ, ವಿವಿಧ ಇಲಾಖೆಗಳ ನೌಕರರು, ಶಿಕ್ಷಕರು ಉಪಸ್ಥಿತರಿದ್ದು ಜಾಗೃತಿ ಓಟ ನಡೆಸಿದರು.

ತೇರದಾಳದಿಂದ ಬನಹಟ್ಟಿವರೆಗೆ ಮ್ಯಾರಾಥಾನ್: ಅಲ್ಲಮಪ್ರಭು ದೇವಸ್ಥಾನದಿಂದ ಹೊರಟ ಮ್ಯಾರಾಥಾನ, ಜಾಗೃತಿ ಜಾಥಾ ಸಿದ್ದೆÃಶ್ವರ ಗಲ್ಲಿ, ಪೇಟೆ ಭಾಗ, ತಹಶೀಲ್ದಾರ ಕಚೇರಿ, ಬಸ್ ನಿಲ್ದಾಣ, ಮಹಾವೀರ ವೃತ್ತ, ಪೊಲೀಸ್ ಠಾಣೆ, ಹನಗಂಡಿ ಗ್ರಾಮ, ರಬಕವಿ ದಾನಮ್ಮದೇವಿ ದೇವಸ್ಥಾನ ಮಾರ್ಗದ ಮೂಲಕ ರಬಕವಿ ಮುಖ್ಯರಸ್ತೆ. ಮಾರುಕಟ್ಟೆ, ರಾಮಪೂರ, ಬನಹಟ್ಟಿ ಎಸ್‌ಆರ್‌ಎ ಮೈದಾನ ಮುಂಭಾಗದ ಚಿಕ್ಕೊÃಡಿ ತಮ್ಮಣ್ಣಪ್ಪ ರಸ್ತೆಯ ಮೂಲಕ ತೆರಳಿ ನಗರದ ಮಹಾದೇವಪ್ಪ ಬಂಗ್ಲೆ ಮುಂಭಾಗದ ವೃತ್ತದಲ್ಲಿ ಸಮಾಪ್ತಿಗೊಂಡಿತು. ೧೦ಕಿ.ಮೀ.ವರೆಗೆ ಜಾಥಾ ನಡೆದು ಬಂದಿತು. ಮಾರ್ಗದ ನಡುವೆ ಅಲ್ಲಲ್ಲಿ ಮತದಾನ ಜಾಗೃತಿ ಕುರಿತಂತೆ ಬೀದಿ ನಾಟಕ ಮಕ್ಕಳಿಂದ ಪ್ರದರ್ಶಿತಗೊಂಡವು.

loading...