ಜೆಡಿಎಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲು

0
37

ನರಗುಂದ: ಶಾಸಕ ಸಿ.ಸಿ.ಪಾಟೀಲ ಅವರ ಫೇಸ್ ಬುಕ್ ಅಕೌಂಟ್ ಅನ್ನು ಟ್ಯಾಗ್ ಮಾಡಿದ್ದಲ್ಲದೇ ರಾಜ್ಯದ ಬಿಜೆಪಿ ಸಂಸದರನ್ನು ಟೀಕಿಸಿದ್ದ ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸುವಂತೆ ನರಗುಂದ ಪೋಲಿಸ್ ಠಾಣೆಯಲ್ಲಿ ಬಿಜೆಪಿ ಮಾ.೩೧ ರಂದು ದೂರು ದಾಖಲಿಸಿರುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
ರಾಜ್ಯದ ೧೫ ಜನ ಬಿಜೆಪಿ ಸಂಸದರು ರಾಜ್ಯಕ್ಕೆ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವ ಒಂದೇ ಒಂದು ಯೋಜನೆಯನ್ನು ತಂದಿದ್ದಾರೆಯೇ ಎಂದು ಪ್ರಶ್ನಿಸಿ ಪಟ್ಟಣದ ಜೆಡಿಎಸ್ ಪಕ್ಷದ ಕಾರ್ಯಕರ್ತ ಶಿವಪ್ರಕಾಶ ಹುಬ್ಬಳ್ಳಿ ಎಂಬ ವ್ಯಕ್ತಿ ತನ್ನ ಫೆಸ್ ಬುಕ್‌ನಲ್ಲಿ ಬರೆದುಕೊಂಡು ೧೫ ಬಿಜೆಪಿ ಸಂಸದರ ಭಾವಚಿತ್ರದೊಂದಿಗೆ ಇವರಿಂದ ರಾಜ್ಯಕ್ಕಾದ ಲಾಭವೇನು?. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕೂಡಾ ರಾಜ್ಯದ ಜನಮಾನಸದಲ್ಲಿ ನೆಲೆಸುವಂತಹ ಒಂದೇ ಒಂದು ಯೋಜನೆಯನ್ನು ಇವರು ರಾಜ್ಯಕ್ಕೆ ತಂದಿದ್ದಾರೆಯೇ ಎಂದು ಪ್ರಶ್ನಿಸಿ ಮಾ.೨೯ ರಂದು ರಾತ್ರಿ ೮.೩೭ ನಿಮಿಷಕ್ಕೆ ಶಾಸಕ ಸಿ.ಸಿ.ಪಾಟೀಲ ಅವರ ಫೇಸ್ ಬುಕ್ ಅಕೌಂಟ್‌ಗೆ ಟ್ಯಾಗ್ ಮಾಡಿದ್ದಾನೆ.
ಇದರಿಂದ ಶಾಸಕ ಸಿ.ಸಿ.ಪಾಟೀಲ ಅವರ ವಯಕ್ತಿಕ ಗೌರವಕ್ಕೆ ಧಕ್ಕೆಯುಂಟಾಗಿದೆ. ಈ ಪೋಸ್ಟ್ನಿಂದಾಗಿ ಸಾರ್ವಜನಿಕರಿಗೆ ತಪ್ಪು ಸಂದೇಶ ಕಳಿಸಿದ ಈ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವಂತೆ ಮಲ್ಲಪ್ಪ ಮೇಟಿ ಮಾ.೩೧ ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಂಡಿದ್ದಾರೆ.

loading...