ಮಕ್ಕಳಿಗೆ ಸಾಮಾಜಿಕ ತಿಳುವಳಿಕೆ ಅವಶ್ಯ

0
24

ಗದಗ: ಮಕ್ಕಳಿಗೆ ಸಾಮಾನ್ಯ ಮತ್ತು ಸಾಮಾಜಿಕ ತಿಳುವಳಿಕೆ ಬೇಕಾಗಿದೆ. ಕೇವಲ ಪಠ್ಯಕ್ರಮ ಮತ್ತು ಪಠ್ಯೆÃತರ ಚಟುವಟಿಕೆಯಿಂದ ಪರಿಪೂರ್ಣ ನಾಗರಿಕನನ್ನು ಮಾಡಲು ಸಾಧ್ಯವಿಲ್ಲ ಎಂದು ಪ್ರಾಚಾರ್ಯ ಬಿ.ಆರ್.ಮಂಗಳಾ ಅಭಿಪ್ರಾಯಪಟ್ಟರು.
ಕೈಲಾಸ ವರಸಿದ್ಧಿ ಗಣಪತಿ ದೇವಸ್ಥಾನದ ಸಿದ್ಧಿಪ್ರಧಾ ಸಭಾ ಭವನದಲ್ಲಿ ಮಕ್ಕಳಿಗೆ ವಿಶೇಷ ಕೌಶಲ್ಯ ತರಬೇತಿ ಮತ್ತು ಉಚಿತ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕೌಶಲ್ಯ ತರಬೇತಿ ಮತ್ತು ಉಚಿತ ಯೋಗ ಶಿಬಿರವು ಸಂಸ್ಕೃತಿ, ಸಂಸ್ಕಾರ, ಸಾಮಾನ್ಯ ಜ್ಞಾನದ ಜೊತೆಗೆ ಸ್ಪರ್ಧಾತ್ಮಕ ಚಿಂತನೆಯನ್ನು ಒಳಗೊಂಡಿದೆ ಎಂದರು.
ರವಿ ಗುಂಜೀಕರ ಸನ್ಮಾನ ಸ್ವಿÃಕರಿಸಿ ಮಾತನಾಡಿ, ಮಕ್ಕಳಲ್ಲಿ ಯೋಗ ಮತ್ತು ಯೋಗ್ಯತೆಯನ್ನು ಹೆಚ್ಚಿಸುವಂತಾಗಲಿ ಎಂದರು. ನ್ಯಾಯವಾದಿ ಟಿ.ಎನ್.ಭಾಂಡಗೆ ಮಾತನಾಡಿ, ಮಕ್ಕಳಿಗೆ ವಾಸ್ತವಿಕ ಬದುಕನ್ನು ಅರಿವು ಮೂಡಿಸುವಂತಹ ಉದ್ಧೆÃಶದ ಈ ಶಿಬಿರದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು.
ಡಾ. ಸತೀಶ ಹೊಂಬಾಳಿ ಮಾತನಾಡಿ, ದೈಹಿಕ ಮತ್ತು ಮಾನಸಿಕ ತೊಳಲಾಟಕ್ಕೆ ಯೋಗ, ಧ್ಯಾನ, ಪ್ರಾಣಾಯಾಮ ಅತ್ಯಂತ ಅಧ್ಬುತ ಚಿಕತ್ಸೆಯಾಗಿದ್ದು ೧೦ ವರ್ಷದ ಮೇಲ್ಪಟ್ಟ ಎಲ್ಲ ಮಹಿಳೆ ಹಾಗೂ ಪುರುಷರಿಗೆ ಆಯೋಜನೆ ಮಾಡಲಾಗಿದೆ ಎಂದರು. ಪ್ರಸನ್ನಕುಮಾರ ಬಸರೂರ ಮಾತನಾಡಿ, ಸಾಮಾಜದಲ್ಲಿಯ ಸರ್ವ ಜನಾಂಗವು ಸುಖ, ಶಾಂತಿ, ನೆಮ್ಮದಿಯಿಂದ ಆರೋಗ್ಯವಂತ ಜೀವನ ನಡೆಸಬೇಕೆಂಬ ಹಂಬಲದೊಂದಿಗೆ ಈ ಶಿಬಿರ ಏರ್ಪಡಿಸಿದೆ ಎಂದರು. ರಾಘವೇಂದ್ರ ಶೆಟ್ಟಿ ಹಾಗೂ ಶ್ರಿÃಕಾಂತ ಜಗತಾಪ ಮಾತನಾಡಿದರು. ಫಕ್ಕಿÃರೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಪಾಲಕರು, ಬಾಲಕರು, ಶಿಕ್ಷಕರು, ಸಂಘಟಿಕರು, ಸಂಘ ಸಂಸ್ಥೆಗಳು, ಧಾರ್ಮಿಕ, ಸಾಮಾಜಿಕ ಚಿಂತಕರು ಜವಾಬ್ದಾರಿಯನ್ನು ಅರಿತು ನಡೆದರೆ ಇಂತಹ ಜನಪರ ಕರ‍್ಯಗಳು ನಡೆಯಲು ಸಾಧ್ಯ ಎಂದರು.
ಕರ್ನಾಟಕ ಮಾದ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಎಸ್.ವ್ಹಿ.ಶಿವಪ್ಪಯ್ಯನಮಠ ಅವರನ್ನು ಸನ್ಮಾನಿಸಲಾಯಿತು.ಅನಂತ ಕಾರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾಕುಮಾರಿ ಬಿ.ಎಂ. ನಿರೂಪಿಸಿದರು. ವಿಜಯಲಕ್ಷಿö್ಮÃ ಪುರಾಣಿಕ ಸ್ವಾಗತಿಸಿದರು. ಕಿರಣ ಜೋಶಿ ವಂದಿಸಿದರು. ರಾಮಚಂದ್ರ ಹೆಗಡೆ, ಸಿದ್ಲಿಂಗೇಶ ಕಾಳಗಿ, ಸಚಿನಾ ಗಾಯಕವಾಡ, ಲಲಿತಾ ಇಂಗ್ಳಳ್ಳಿ, ಶ್ರಿÃಶೈಲ ಬಿಳೆಎಲಿ ಇದ್ದರು.

loading...