ಸಿದ್ದರಾಮಯ್ಯನಿಗೆ ಜಾತಿ ಬಿಟ್ರೇ ಏನು ಗೊತ್ತಿಲ್ಲ : ‌ಈಶ್ವರಪ್ಪ

0
29

ಕನ್ನಡಮ್ಮ ಸುದ್ದಿ-ಬೆಳಗಾವಿ : ಮಾಜಿ‌ ಸಿಎಂ ಸಿದ್ಧರಾಮಯ್ಯ ಅವರಿಗಡ ಜಾತಿ ಬಿಟ್ರೇ ಏನು ಗೊತ್ತಿಲ್ಲ. ಕುರುಬರಿಗೆ ಎಷ್ಟು ಅನುಕೂಲ‌ಮಾಡಿದ್ದಾರೆ ಎಂದು ಕೆ.ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಅವರು ಬುಧವಾರ ಮಾಧ್ಯಮದೊಂದಿಗೆ ಮಾತನಾಡಿ,ಆಪರೇಷನ್ ಕಮಲ ಆರಂಭದ ಪ್ರಶ್ನೇಯೇ ಇಲ್ಲ‌.ಕಾಂಗ್ರೆಸ್ಗೆ ಜೆಡಿಎಸ್ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳುವಲ್ಲಿ ವಿಫಲವಾಗಿದೆ. ಅನೇಕ ಶಾಸಕರಿಗೆ ಸರ್ಕಾರದ ಮೇಲೆ ಅತೃಪ್ತಿ ಇದೆ. ಅತೃಪ್ತ ಶಾಸಕರಿಗೆ ರಾಜಿನಾಮೆ ಅಂಗೀಕಾರದ ಭಯ ಇತ್ತು.ಈಗಲೂ ಸಹ ಅತೃಪ್ತ ಶಾಸಕರು ರಾಜೀನಾಮೇ ನೀಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಅಲ್ಲದೆ ಸಿದ್ದರಾಮಯ್ಯ ಕುರುಬ ಜನಾಂಗಕ್ಕೆ ಅನ್ಯಾಯ ಮಾಡಿದ್ದಾರೆ. ಸೋಲುವ ಕಡೆಗಳಲ್ಲಿ ಕುರುಬರಿಗೆ ಟಿಕೆಟ್ ನೀಡಿದ್ದಾರೆ ಎಂದರು.

ಮಂಡ್ಯ ರಾಜಕೀಯ ಬೆಳವಣಿಗೆಯ ಬಗ್ಗೆ ಮಾತನಾಡಿ, ಮಂಡ್ಯದಲ್ಲಿ ಸುಮಲತಾ ಜಾತಿ ವಿಚಾರ ಪ್ರಸ್ತಾಪ. ಜೆಡಿಎಸ್, ಕಾಂಗ್ರೆಸ್ ನಮ್ಮನ್ನು ಜಾತಿವಾದಿಗಳು ಎನ್ನುತ್ತಾರೆ. ಈಗ ನಾಯ್ಡು, ಕುರುಬ, ಒಕ್ಕಲಿಗರು ತಂದಿದ್ದು ಯಾರು. ಜಾತಿ ಬಗ್ಗೆ ಸಿದ್ದರಾಮಯ್ಯ, ಶಿವರಾಮೇಗೌಡ ಹಾಗೂ ದೇವೇಗೌಡ ಮಾತನಾಡುತ್ತಾರೆ. ನಮ್ಮನ್ನು ಕೋಮುವಾದಿಗಳು ಎನ್ನುತ್ತಾರೆ.
ಇದಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

loading...