ಅಣ್ಣಾಸಾಹೇಬ್ ಜೊಲ್ಲೆ ನಾಮಪತ್ರ ಸಲ್ಲಿಕೆ ವೇಳೆ ಉಮೇಶ ಕತ್ತಿ ಸಾಥ್

0
348

ಕನ್ನಡಮ್ಮ ಸುದ್ದಿ-ಚಿಕ್ಕೊÃಡಿ: ಚಿಕ್ಕೊÃಡಿ ಲೋಕಸಭಾ ಕ್ಷೆÃತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಇಂದು ನಾಮಪತ್ರ ಸಲ್ಲಿಸಲು ಕುಟುಂಬ ಸಮೇತರಾಗಿ ಎಸಿ ಕಚೇರಿಗೆ ಆಗಮಿಸಿದ್ದರು. ಅದಕ್ಕಾಗಿ ಕತ್ತಿ ಸಹೋದರರು ನಾಮ ಪತ್ರಿಕೆ ಸಲ್ಲಿಕೆ ವೇಳೆ ಸಾಥ್ ನೀಡಬಹುದು ಎಂದು ಜೊಲ್ಲೆ ದಂಪತಿ ಕಾದಿದ್ದರು. ಜೊಲ್ಲೆ ದಂಪತಿ ನಂಬಿಕೆ ಹುಸಿಯಾಗಲಿಲ್ಲ. ಕೊನೆ ಕ್ಷಣದಲ್ಲಿ ಅಣ್ಣಾಸಾಹೇಬ್ ಜೊಲ್ಲೆ ನಾಮಪತ್ರ ಸಲ್ಲಿಕೆ ವೇಳೆ ಶಾಸಕ ಉಮೇಶ ಕತ್ತಿ ಚಿಕ್ಕೊÃಡಿ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಸಾಥ್ ನೀಡಿ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಕೆ.ಎಸ್ ಈಶ್ವರಪ್ಪ, ಶಾಸಕ ಪಿ. ರಾಜೀವ್, ಶಾಸಕ ಡಿ.ಎಂ. ಐಹೊಳೆ, ಎಂಎಲ್‌ಸಿ ಮಹಾಂತೇಶ ಕವಟಗಿಮಠ ಸಾಥ್ ನೀಡಿದರು.

loading...