ಇರಾನ್‍ನಲ್ಲಿ ಪ್ರವಾಹ: ಕಳೆದ 2 ವಾರಗಳಲ್ಲಿ 57 ಮಂದಿ ಸಾವು

0
9

ಟೆಹ್ರಾನ್‍  (ಕ್ಸಿನುವಾ)- ಇರಾನ್‍ ಬಹುತೇಕ ಭಾಗಗಳಲ್ಲಿ ಕಳೆದೆರಡು ವಾರಗಳಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹಗಳಿಂದ ಕನಿಷ್ಠ 57 ಮಂದಿ ಮೃತಪಟ್ಟಿದ್ದಾರೆ ಎಂದು ಇರಾನ್‍ ತುರ್ತು ಸಂಸ್ಥೆ ಮಂಗಳವಾರ ತಿಳಿಸಿದೆ.
ಇತ್ತೀಚಿನ ಪ್ರವಾಗಳಿಂದ ಇತರ 478 ಮಂದಿ ಗಾಯಗೊಂಡಿದ್ದಾರೆ ಎಂದು ಸಂಸ್ಥೆಯ ವಕ್ತಾರ ಮೊಜ್ತಬಾ ಖಲೇದಿ ಸರ್ಕಾರಿ ಸುದ್ದಿ ಸಂಸ್ಥೆ ಐಆರ್‍ಎನ್‍ಎಗೆ ತಿಳಿಸಿದ್ದಾರೆ.
ತಿಂಗಳ 19ರಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತು ಪ್ರವಾಹಗಳಿಂದ ಇರಾನ್‍ ಕೃಷಿ ವಲಯ, ಮೂಲ ಸೌಕರ್ಯ ಸೇರಿದಂತೆ ಕಳೆದ ಗ್ರಾಮೀಣ ಮತ್ತು ನಗರ ವಸತಿ ಪ್ರದೇಶಗಳಲ್ಲಿ ತೀವ್ರ ಹಾನಿಯಾಗಿದೆ.
ಪಶ್ಚಿಮ ಇರಾನ್‍ನ ಹತ್ತಾರು ಗ್ರಾಮಗಳು ಮತ್ತು ನಗರಗಳು ಇನ್ನೂ ಅಧಿಕ ಮಟ್ಟದ ನೀರಿನಿಂದ ಆವೃತವಾಗಿವೆ.
ಲೊರೆಸ್ತಾನ್‍ ಪ್ರಾಂತ್ಯದ ಪೊಲ್‍ದೊಕ್ತರ್‍ ಕೌಂಟಿಯಲ್ಲಿ ಅನೇಕ ಗ್ರಾಮಗಳು ಕೆಸರು ಮತ್ತು ಮಣ್ಣಿನಲ್ಲಿ ಕಣ್ಮರೆಯಾಗಿವೆ ಎಂದು ಸಂಸ್ಥೆ ತಿಳಿಸಿದೆ.

loading...