ಯುಪಿಯಲ್ಲಿ ಮೋದಿ, ರಾಹುಲ್, ಪ್ರಿಯಾಂಕಾ ಪ್ರಚಾರ ಬಿರುಸು

0
5

ಲಖನೌ:- ಇದೇ 11 ಮತ್ತು 18ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿರುವ ಪಶ್ಚಿಮ ಉತ್ತರಪ್ರದೇಶದ 16 ಲೋಕಸಭಾ ಕ್ಷೇತ್ರಗಳಲ್ಲಿ ಪ್ರತಿ ಮೂಲೆ ಮತ್ತು ಮೂಲೆಗಳನ್ನು ತಲುಪಲು ವಿವಿಧ ಪಕ್ಷಗಳ ಕಾರ್ಯಕರ್ತರು, ನಾಯಕರು ಬಹಳ ಪ್ರಯಾಸ ಪಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ , ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಇದೇ ವಾರ ಪ್ರಚಾರ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಲಿದ್ದಾರೆ.

ಮೊದಲ ಹಂತದ ಚುನಾವಣೆ ಪ್ರಚಾರ ಕಾರ್ಯ ಕೊನೆಗೊಳ್ಳಲು ಇನ್ನು ಕೇವಲ 6 ದಿನಗಳು ಮಾತ್ರ ಬಾಕಿ ಉಳಿದಿವೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಯುಪಿ ಪೂರ್ವ) ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜಂಟಿ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ, ಮಾರ್ಚ್ 28 ರಂದು ಮೀರತ್ ನಿಂದ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೇ 5 ರಂದು ಅಮರೋಹಾ ಮತ್ತು ಸಹರಾನ್ ಪುರ ದಿಂದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಮತ್ತು ರಾಜ್ಯ ಮಂತ್ರಿಗಳೊಂದಿಗೆ ಪ್ರತಿ ದಿನ 4 ರಿಂದ 8 ಸಾರ್ವಜನಿಕ ಸಭೆ ನಡೆಸುತ್ತಿದ್ದಾರೆ. ಚುನಾವಣಾ ಪ್ರಚಾರದ ಕೊನೆಯಲ್ಲಿ ಒಂದು ದಿನ ಮುಂಚೆ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ವಾದ್ರಾ, ಉತ್ತರ ಪ್ರದೇಶದ ಪಶ್ಚಿಮ ಭಾಗದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಇದೇ 8ರಂದು ನಾಲ್ಕು ಜಂಟಿ ಸಮಾವೇಶ ನಡೆಸಲಿದ್ದಾರೆ ಎಂದು ಬುಧವಾರ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಸಹರಾನ್ಪುರ್, ಮೀರತ್, ಬಿಜನೋರ್ ಮತ್ತು ಕೈರಾನಾದಲ್ಲಿ ರಾಜಕೀಯ ಸಭೆ ಆಯೋಜಿಸಲಾಗುವುದು. ಎಸ್‌ಪಿ, ಬಿಎಸ್‌ಪಿ ಆರ್‌ಎಲ್‌ಡಿ ‘ಮಹಾಘಟಬಂಧನ್ (ಮಹಾಮೈತ್ರಿ ) ಬಾಗಪತ್ ಮತ್ತು ಮುಝಫರ್ ನಗರ್ ಹೊರತು ಪಡಿಸಿ ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು ಎಂಟು ಸ್ಥಾನಗಳ ಪೈಕಿ ಕಾಂಗ್ರೆಸ್ ಆರು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.
ಆದಾಗ್ಯೂ, ಈವರೆಗೆ ಪ್ರಚಾರದಿಂದ ಕಾಣೆಯಾಗಿರುವ ಸಿಂಧಿಯಾ, 7 ರಂದು ಪಶ್ಚಿಮ ಉತ್ತರ ಪ್ರದೇಶದಲ್ಲಿ ರೋಡ್ ಶೋನೊಂದಿಗೆ ನಾಲ್ಕು ಸಭೆ ನಡೆಸಲಿದ್ದಾರೆ.
ಇದರ ಜೊತೆಗೆ ನೊಯ್ಡಾ, ಖುರ್ಜಾ, ಘಾಜಿಯಾಬಾದ್ ನಲ್ಲಿ ಸಭೆಗಳನ್ನು ಮತ್ತು ಮೀರತ್ ನಲ್ಲಿ ರೋಡ್ ಶೋದಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

loading...